ಸುಳ್ಯ: ಸುಳ್ಯದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಟೈಲ್ಸ್ಗಳ ಅಪೂರ್ವ ಸಂಗ್ರಹದೊಂದಿಗೆ ಸ್ಟಾರ್ ಟೈಲ್ಸ್ ಮಳಿಗೆ ಶುಭಾರಂಭಗೊಂಡಿತು. ಬೆಳೆಯುತ್ತಿರುವ ಸುಳ್ಯಕ್ಕೆ ನೂತನ ಟೈಲ್ಸ್ ಮಳಿಗೆ ಅತ್ಯಂತ ಅಗತ್ಯವಾಗಿದ್ದು ಆಧುನಿಕ ಸುಳ್ಯದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುವಂತಾಗಲಿ ಎಂದು ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಶುಭ ಹಾರೈಸಿದರು. ನೂತನ ಮಳಿಗೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹಾಗು
ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚ್ನ ಧರ್ಮಗುರು ಫಾ.ಅಲ್ವಿನ್ ಡಿಕುನ್ಹಾ ಸೇರಿ ಉದ್ಘಾಟಿಸಿದರು. ಡಾ.ಕೆ.ವಿ.ಚಿದಾನಂದ ಮಾತನಾಡಿ ‘ಸುಳ್ಯವು ಅತ್ಯಂತ ವೇಗವಾಗಿ ಬೆಳೆಯುತಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಟೈಲ್ಸ್ಗಳು ಸೇರಿ ವಿದೇಶದಲ್ಲಿ ದೊರೆಯುವ ಎಲ್ಲವೂ ಈಗ ಸುಳ್ಯದಲ್ಲಿ ದೊರೆಯುತ್ತಿರುವುದು ಸಂತಸದ ವಿಚಾರ. ಸುಳ್ಯದಲ್ಲಿ
ಇನ್ನಷ್ಟು ಸ್ಟಾರ್ ಹೋಟೆಲ್ಗಳು, ವಸತಿಗೃಹಗಳು ಆಗಬೇಕು ಎಂದರು. ಫಾ.ಅಲ್ವಿನ್ ಡಿಕುನ್ಹಾ ಮಾತನಾಡಿ ಸ್ಟಾರ್ ಮಳಿಗೆಯಲ್ಲಿ ಅತ್ಯಂತ ಗುಣಮಟ್ಟದ ಟೈಲ್ಸ್ಗಳು ದೊರೆಯುತ್ತಿದೆ. ಇಲ್ಲಿ ಗುಣಮಟ್ಟದಲ್ಲಿ ರಾಜಿ ಇಲ್ಲ ಎಂಬುದು ಟೈಲ್ಸ್ ಖರೀದಿಸಿದ ಅನುಭವದಿಂದ ತಿಳಿದಿದೆ ಎಂದು ಹೇಳಿದರು.

ಸಯ್ಯದ್ ಸಹೀರ್ ತಙಳ್ ಕುಂಬೋಳ್ ಅವರು ಬೆಳಿಗ್ಗೆ ಮಳಿಗೆಗೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಿದರು.
ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸ್ಟಾರ್ ಟೈಲ್ಸ್ ಮಳಿಗೆಯ ಮಾಲಕ ರಿಯಾಝ್.ಪಿ.ಬಿ, ಸ್ಟಾರ್ ಗ್ರೂಪ್ನ ಸ್ಥಾಪಕ ಬಾಬಾ ಕುಂಞಿ, ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಎಂ.ಬಿ.ಫೌಂಡೇಷನ್ ಅಧ್ಯಕ್ಷ ಎಂ.ಬಿ.ಸದಾಶಿವ, ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ, ಎಸ್.ಸಂಶುದ್ದೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿ.ಪಂ.ಮಾಜಿ ಸದಸ್ಯೆ ಸರಸ್ವತಿ ಕಾಮತ್, ವರ್ತಕರ ಸಂಘದ

ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೃಷ್ಣ ಇಂಜಿನಿಯರ್,ಎಸಿಎಫ್ ಪ್ರಶಾಂತ್ ಪೈ, ಪ್ರಮುಖರಾದ ಪಿ.ಎ.ಮಹಮ್ಮದ್,ಆದಂ ಹಾಜಿ ಕಮ್ಮಾಡಿ, ಅಬ್ದುಲ್ಲ ಕಟ್ಟೆಕ್ಕಾರ್ಸ್, ಮಯೂರ್ ಅಂಬೆಕಲ್ಲು,ಸಂತೋಷ್ ಕುತ್ತಮೊಟ್ಟೆ, ಹೇಮಂತ್ ಕಾಮತ್, ಮಹಮ್ಮದ್ ಕೆ.ಎಂ.ಎಸ್, ಶರೀಫ್ ಕಂಠಿ, ಅಬ್ದುಲ್ ಲತೀಫ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಟಾರ್ ಟೈಲ್ಸ್ ಮಳಿಗೆಯ ಹರಿಪ್ರಸಾದ್ ಅಡ್ತಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ಶರೀಫ್ ಜಟ್ಟಿಪಳ್ಳ, ಬಶೀರ್ ಸ್ವಪ್ನ ಸಹಕರಿಸಿದರು.

ಸಂಸ್ಥೆಯ ಉದ್ಘಾಟನೆಯ ಪ್ರಯುಕ್ತ ಎರಡು ಬಡ ಮಹಿಳೆಯರ ಮನೆಗೆ ಉಚಿತ ಟೈಲ್ಸ್ ನೀಡಲಾಯಿತು. ಬಡ ಕುಟುಂಬಗಳು ನಿರ್ಮಿಸುವ 600 ಚ.ಡಿಯ 10 ಮನೆಗಳಿಗೆ ಪ್ರತಿ ವರ್ಷ ಉಚಿತ ಟೈಲ್ಸ್ಗಳನ್ನು ನೀಡಲಾಗುವುದು ಎಂದು ಪ್ರಕಟಿಸಲಾಯಿತು.
ಅಂತಾರಾಷ್ಟ್ರೀಯ ಖ್ಯಾತಿಯ ಗುಣಮಟ್ಟದ ಟೈಲ್ಸ್ಗಳ 730ಕ್ಕೂ ಅಧಿಕ ಟೈಲ್ಸ್ಗಳನ್ನು ಒಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತೀ ದೊಡ್ಡದು ಎನ್ನಬಹುದಾದ ಟೈಲ್ಸ್ ಮಾರಾಟ ಮಳಿಗೆ ಸುಳ್ಯ ನಗರದ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿಯ ಎಂ.ಕೆ.ರೆಸಿಡೆನ್ಸಿಯಲ್ಲಿ 2026 ಜೂ.1 ರಂದು
ಶುಭಾರಂಭಗೊಂಡಿತು. ಕಳೆದ ಎರಡು ದಶಕಗಳಿಂದ ಟೈಲ್ಸ್ ಉದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿ ಕೇರಳದಲ್ಲಿ ಮನೆ ಮಾತಾಗಿರುವ ಕಾಸರಗೋಡು ಚರ್ಕಳ ಮೂಲದ ಉದ್ಯಮಿ ರಿಯಾಝ್ ಪಿ.ಬಿ.ಮಾಲಕತ್ವದ ಸ್ಟಾರ್ ಟೈಲ್ಸ್ ಉದ್ಯಮ ಸುಳ್ಯಕ್ಕೆ

ತಮ್ಮ ಉದ್ಯಮ ಕ್ಷೇತ್ರವನ್ನು ವಿಸ್ತರಿಸಿದೆ. 9000 ಚದರ ಅಡಿ ವಿಶಾಲವಾದ ಮಳಿಗೆಯನ್ನು ತೆರೆಯಲಾಗುತ್ತದೆ.ಗ್ರಾಹಕರ ಆಯ್ಕೆಯ ಟೈಲ್ಸ್ಗಳನ್ನು ಕ್ಲಿಪ್ತ ಸಮಯದಲ್ಲಿ ಸರಬರಾಜು ಮಾಡಲಾಗುವುದು ಎಂದು ಸ್ಟಾರ್ ಟೈಲ್ಸ್ನ ಮಾಲಕರಾದ ರಿಯಾಝ್ ತಿಳಿಸಿದ್ದಾರೆ ಶೋರೂಮ್ನಲ್ಲಿ ವಿವಿಧ ವಿನ್ಯಾಸ ಮತ್ತು ಗುಣಮಟ್ಟದ ಟೈಲ್ಸ್ಗಳನ್ನು ಡಿಸ್ಪ್ಲೇ ಮಾಡುವ ಮೂಲಕ ಟೈಲ್ಸ್ಗಳ ಅದ್ಭುತ ಲೋಕವನ್ನು ತೆರೆಯಲಾಗಿದೆ. ಜೊತೆಗೆ ಬೃಹತ್ ಗೋದಾಮುಗಳನ್ನು ನಿರ್ಮಿಸಲಾಗಿದೆ.ಟೈಲ್ಸ್ಗಳ ಜೊತೆಗೆ ಸಾನಿಟರಿ, ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸದ ಎಲ್ಲಾ ಉಪಕರಣಗಳು ಇಲ್ಲಿ ಲಭ್ಯವಿದೆ.














