ಸುಳ್ಯ:ನಿನ್ನೆ ನಿಧನರಾದ ಹಿರಿಯ ಪತ್ರಕರ್ತ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜೆ.ಕೆ.ರೈ ಅವರಿಗೆ ನೂರಾರು ಮಂದಿ ನಮನ ಸಲ್ಲಿಸಿದರು. ಗಣ್ಯರು ಸೇರಿ ನೂರಾರು ಮಂದಿ ಅವರ ನಾರ್ಕೋಡಿನ ಹಾಗು ಗಾಂಧಿನಗರದ ಮನೆಯಲ್ಲಿ
ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಫ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪಿ. ಎಸ್. ಗಂಗಾಧರ ಮೊದಲಾದವರು ಅಂತಿಮ ದರ್ಶನ ಪಡೆದರು.ಪ್ರಮುಖರು ಸಂತಾಪ ಸೂಚಿಸಿದರು.ಬಳಿಕ ಮೃತರ ಅಂತ್ಯ ಸಂಸ್ಕಾರ ಸುಳ್ಯ ಕೊಡಿಯಾಲಬೈಲಿನ ವಿಮುಕ್ತಿ ಧಾಮದಲ್ಲಿ ನಡೆಯಿತು.









