ಪಂಜ:ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವು ನಡೆಯಿತು.ವಿದ್ಯಾರ್ಥಿಗಳನ್ನು ಮತ್ತು ಅತಿಥಿಗಳನ್ನು ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಶಾಲಾ ಹೊಸ ಕಟ್ಟಡವನ್ನು ಅತಿಥಿಗಳು ಉದ್ಘಾಟನೆ ಮಾಡಿದರು. ಶಾಲಾ ಪ್ರಾರಂಭೋತ್ಸವಕ್ಕೆ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು ದೀಪೋಜ್ವಲನೆಯ ಮೂಲಕ ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳಿಗೆ
ಕಬ್ ಬುಲ್ ಬುಲ್ ಸಮವಸ್ತ್ರ ಮತ್ತು ಯೋಗ ಮ್ಯಾಟ್ ವಿತರಿಸುವುದರ ಮೂಲಕ ಹಾಗೂ ವಿದ್ಯಾರ್ಥಿಗಳನ್ನು ಕರಕುಶಲ ಕಲೆಯಲ್ಲಿ ಪರಿಣಿತರನ್ನಾಗಿಸಲು ಹೊಲಿಗೆ ತರಬೇತಿಗೆ ಬೇಕಾದ ಹೊಲಿಗೆ ಯಂತ್ರಕ್ಕೆ ಚಾಲನೆಯನ್ನು ನೀಡಲಾಯಿತು.ನಂತರ ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆಯ ಮೂಲಕ ಕರೆದುಕೊಂಡು ಬಂದು ಆರತಿ ಬೆಳಗಿ ಹೂವನ್ನು ನೀಡಿ ಶಾಲೆಗೆ

ಸ್ವಾಗತಿಸಲಾಯಿತು. ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು ಮಾತನಾಡಿ ಸರಕಾರಿ ಶಾಲೆಯಲ್ಲಿ ಎಲ್ಲಾ ಸವಲತ್ತುಗಳು ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದು ಅವುಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ನಿಮ್ಮ ಮುಂದಿನ ಭವಿಷ್ಯವನ್ನು ಉಜ್ವಲವಾಗಿಸಿ ಎಂದು ಶುಭ ಹಾರೈಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನುರಾಜ್ ಕಕ್ಯಾನ, ಪಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಜಳಕದಹೊಳೆ, ಪಂಚಾಯತ್ ಮಾಜಿ ಸದಸ್ಯರಾದ ಪ್ರಮೀಳಾ ಸಂಪ, ನಿವೃತ್ತ ಶಿಕ್ಷಕರಾದ ಕುಸುಮಾಧರ ಕೆಮ್ಮೂರು, ನಿವೃತ್ತ ಶಿಕ್ಷಕಿಯವರಾದ ಸೀತಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಧುಚಂದ್ರ ಆಚಾರ್ಯ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕವಿತಾ ಪುತ್ಯ, ಪ್ರಭಾರ

ಮುಖ್ಯ ಶಿಕ್ಷಕಿ ಸರೋಜಿನಿ.ಕೆ, ಸಹ ಶಿಕ್ಷಕಿಯರಾದ ವಿದ್ಯಾಶ್ರೀ ಗೌಡ, ವನಜಾಕ್ಷಿ ಬಿ .ಎಂ ಉಪಸ್ಥಿತರಿದ್ದರು, ಸರ್ಕಾರವು ಒದಗಿಸಿರುವ ಉಚಿತ ಪಠ್ಯಪುಸ್ತಕವನ್ನು ವೇದಿಕೆಯಲ್ಲಿರುವ ಗಣ್ಯರು ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ವಿತರಿಸಿದರು. ಹಿರಿಯವಿದ್ಯಾರ್ಥಿಗಳಾದ ಪ್ರಸಾದ್ ನಾಗತೀರ್ಥ, ಸತೀಶ್ ನಾಗತೀರ್ಥ, ಯತೀಶ್ ನಾಗತೀರ್ಥ, ಕೃತಿಕ್ ಬೇರ್ಯ, ತಿರುಮಲೇಶ್ವರ ಮುಚ್ಚಿಲ, ಮಹೇಶ್ ಕಕ್ಯಾನ ಇವರು ಬರೆಯುವ ಪುಸ್ತಕಗಳನ್ನು ಉಚಿತವಾಗಿ ಹಸ್ತಾಂತರಿಸಿದರು. ಶಾಲಾ ಮುಖ್ಯ ಗುರುಗಳಾದ ಸರೋಜಿನಿ,ಕೆ ಮಾಹಿತಿ ನೀಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಧುಚಂದ್ರ ಆಚಾರ್ಯ ಶುಭ ಹಾರೈಸಿದರು. ಸಹ ಶಿಕ್ಷಕಿಯಾದ ವಿದ್ಯಾಶ್ರೀ ಗೌಡ ಹಾಗು ಮಂಜುಳ ವೈ. ಕಾರ್ಯಕ್ರಮ ನಿರೂಪಿಸಿದರು. ವನಜಾಕ್ಷಿ ಬಿ ಎಂ. ವಂದಿಸಿದರು.














