ಸುಳ್ಯ:ಎಸ್ಎಸ್ಎಫ್ ಸುಳ್ಯ ಸೆಕ್ಟರ್ ಸಭೆ ಸಮೀರ್ ಡಿ ಎಚ್ ರವರ ಅಧ್ಯಕ್ಷತೆಯಲ್ಲಿ ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು. ಸಭೆಗೆ ವೀಕ್ಷಕರಾಗಿ ಡಿವಿಷನ್ ಅಧ್ಯಕ್ಷ ಸಿದ್ದೀಕ್ ಹಿಮಮಿ ಸಖಾಫಿ,ಡಿವಿಷನ್ ಪ್ರಧಾನ ಕಾರ್ಯದರ್ಶಿ ಕಬೀರ್ ಜಟ್ಟಿಪಳ ಹಾಗೂ ಕಾರ್ಯದರ್ಶಿಗಳಾದ ರಿಯಾನ್ ಸಅದಿ ಆಗಮಿಸಿದ್ದರು. ಈ ಸಂದರ್ಭದಲ್ಲಿ
ನೂತನ ಸಮಿತಿ ರಚಿಸಲಾಗಿ ಅಧ್ಯಕ್ಷರಾಗಿ ಅಬಿದ್ ಕಲ್ಲುಮುಟ್ಲು, ಉಪಾಧ್ಯಕ್ಷರಾಗಿ ಸಾದಿಕ್ ಪಿ ಜಿ, ಪ್ರಧಾನ ಕಾರ್ಯದರ್ಶಿಯಾಗಿ ಸಲ್ಮಾನ್ ಹಿಮಮಿ, ಕೋಶಾಧಿಕಾರಿಯಾಗಿ ನಾಸಿರ್ ಎಲಿಮಲೆ, QD ಕಾರ್ಯದರ್ಶಿ ಆಸಿಫ್ ಎಲಿಮಲೆ, ದಅವ ಕಾರ್ಯದರ್ಶಿ ಅಫ್ಲಹ್ ಮೊಗರ್ಪಣೆ, ಕ್ಯಾಂಪಸ್ ಕಾರ್ಯದರ್ಶಿ ಕಮಾಲ್ ಗಾಂಧಿನಗರ, ಮೀಡಿಯಾ ಕಾರ್ಯದರ್ಶಿ ರುನೈಝ್ ಕೊಯನಾಡು, GD ಕಾರ್ಯದರ್ಶಿ ಅಝರುದ್ದೀನ್ ಏಣಾವರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಶೀರ್ ಕಲ್ಲುಮುಟ್ಲು, ಉನೈಸ್ ಗೂನಡ್ಕ, ಆಸಿಫ್ ಮೊಗರ್ಪಣೆ, ಹಾಫೀಝ್ ಸಿದ್ದೀಕ್, ಮಶೂದ್ ಹಿಮಮಿ, ಇರ್ಫಾನ್ ಏಣಾವರ, ರವೂಫ್ ಹಿಕಮಿ ಆಯ್ಕೆಯಾದರು, ಸಲ್ಮಾನ್ ಹಿಮಮಿ ಸ್ವಾಗತಿಸಿ ವಂದಿಸಿದರು.