ಚೆನ್ನೈ: ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಎರಡನೇ ಕ್ವಾಲಿಫೈಯರ್ ಪಂದ್ಯ ಶುಕ್ರವಾರ ನಡೆಯಲಿದೆ. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮ, ಹೆನ್ರಿಚ್ ಕ್ಲಾಸೆನ್ ಸೇರಿದ ಹೈದರಾಬಾದ್ನ ಬಲಿಷ್ಠ ಬ್ಯಾಟಿಂಗ್ ಹಾಗೂ
ರವಿಚಂದ್ರನ್ ಅಶ್ವಿನ್, ಯೂಸವೇಂದ್ರ ಚಾಹಲ್ ಸ್ಪಿನ್ ಬೌಲಿಂಗ್ ಮಧ್ಯೆ ಹೋರಾಟ ನಡೆಯಲಿದೆ.
ರಾಜಸ್ಥಾನ ರಾಯಲ್ಸ್, ಐದು ಪಂದ್ಯಗಳ ಸೋಲಿನ ಸರಪಣಿಯನ್ನು, ಆರ್ಸಿಬಿ ಎದುರು ಎಲಿಮಿನೇಷನ್ ಪಂದ್ಯದಲ್ಲಿ ಕಡಿದುಕೊಂಡಿತ್ತು. ಅದರ ಸರ್ವಾಂಗೀಣ ಪ್ರದರ್ಶನ ಗೆಲುವಿಗೆ ನೆರವಾಗಿತ್ತು.
ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಮತ್ತು ಜಿಯೊ ಸಿನಿಮಾ ಆ್ಯಪ್.