ಸುಳ್ಯ: ಸಮಸ್ಯೆಯನ್ನು ಪರಿಹರಿಸಲು ಸಂಬಂಧಪಟ್ಟವರು ತೋರಿದ ನಿರ್ಲಕ್ಷ್ಯದಿಂದ ಕಲರ್ಪೆಯ ಘನ ತ್ಯಾಜ್ಯ ಹಾಗೂ ಕೊಳಚೆ ನೀರು ಪಯಸ್ವಿನಿ ನದಿಯನ್ನು ಸೇರುತಿದೆ ಎಂದು ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೆ.ಗೋಕುಲ್ದಾಸ್ ಹೇಳಿದ್ದಾರೆ. ಕಲ್ಚರ್ಪೆಯಲ್ಲಿ ಹಲವಾರು ವರ್ಷಗಳಿಂದ ಶೇಖರಣೆ ಮಾಡಿದ
ಘನತ್ಯಾಜ್ಯ ವಸ್ತುಗಳು ಮಳೆಗಾಲ ಸಂದರ್ಭದಲ್ಲಿ ಅರಣ್ಯ ಪ್ರದೇಶದಿಂದ ಹರಿದು ಬರುವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಪಯಸ್ವಿನಿ ನದಿಗೆ ಸೇರುತ್ತದೆ. ಇದೇ ನೀರು ಸುಳ್ಯ ನಗರ ಪಂಚಾಯತ್ ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತಂದರು ಪರಿಸರಕ್ಕೆ ಭೇಟಿ ನೀಡಿ ಭರವಸೆಯನ್ನು ಕೊಟ್ಟು ಹೋದದ್ದು ಅಲ್ಲದೆ ಈತನಕ ಯಾವುದೇ ವ್ಯವಸ್ಥೆ ಆಗಿಲ್ಲ. ಅಧಿಕಾರಿಗಳ ಹಾಗೂ ಸಂಬಂಧಪಟ್ಟವರ ನಿರ್ಲಕ್ಷವೇ ಈ ಸಮಸ್ಯೆಗೆ ಕಾರಣ. ಈ ನೀರನ್ನು ಬಳಸುವ ಸುಳ್ಯದ ಜನರು ಜಾಗೃತರಾಗಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.