ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗರಡಿಬೈಲ್ ಶ್ರೀ ಉಳ್ಳಾಕುಲು, ಶ್ರೀ ಕಾಚುಕುಜುಂಬ ದೈವಸ್ಥಾನಗಳಲ್ಲಿ ಜೂ.15ರಂದು ಸಂಕ್ರಮಣ ಪೂಜೆ ಹಾಗೂ ತಂಬಿಲ ಸೇವೆ ನಡೆಯಿತು. ಸ್ವರ್ಣ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ಪ್ರಕಾರ
ಮೊದಲು ಗರಡಿ ಬೈಲ್ ದೈವಸ್ಥಾನಗಳಲ್ಲಿ ಸಂಕ್ರಮಣ ಪೂಜೆ ಮಾಡಿ ಮತ್ತೆ ದೇಗುಲದ ಎದುರು ಇರುವ ದೈವಸ್ಥಾನಗಳಲ್ಲಿ ಸಂಕ್ರಮಣ ಪೂಜೆ ಹಾಗೂ ತಂಬಿಲ ಸೇವೆ ನಡೆಯಿತು. ಹಲವು ಮಂದಿ ಭಕ್ತರು ಗರಡಿ ಬೈಲ್ ದೈವಸ್ಥಾನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಪಂಜ ಶ್ರಿ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗು ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗು ಭಕ್ತರು ಇದ್ದರು.








