ದೆಹಲಿ:ವಿಶ್ವಕಪ್ ಇತಿಹಾಸದಲ್ಲಿ ದಾಖಲೆಯ ಮೊತ್ತ ಪೇರಿಸಿದ ದಕ್ಷಿಣ ಆಫ್ರಿಕಾ ಶ್ರೀಲಂಕಾಕ್ಕೆ ಬೃಹತ್ ಗುರಿ ನೀಡಿದ. ಮೂರು ಮಂದಿ ಬ್ಯಾಟರ್ಗಳು ಸಿಡಿಸಿದ ಭರ್ಜರಿ ಶತಕಗಳ ನೆರವಿನಿಂದ
ದಕ್ಷಿಣ ಆಫ್ರಿಕಾ ತಂಡವು ಶ್ರೀಲಂಕಾ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನಿಗದಿತ 50 ಓವರ್ಗಳಲ್ಲಿ
ಐದು ವಿಕೆಟ್ ನಷ್ಟಕ್ಕೆ 428 ರನ್ಗಳ ಬೃಹತ್ ಮೊತ್ತ ಪೇರಿಸಿದೆ. ಕ್ವಿಂಟನ್ ಡಿಕಾಕ್ (100), ರಸ್ಸೀ ವ್ಯಾನ್ಡರ್ಸಾನ್ (108) ಹಾಗೂ ಏಡೆನ್ ಮಾರ್ಕರಮ್ (106) ಆಕರ್ಷಕ ಶತಕಗಳ ಶತಕ ಬಾರಿಸಿದರು. ಮಾರ್ಕರಮ್ ವಿಶ್ವಕಪ್ನ ಅತಿ ವೇಗದ ಶತಕ ಸಿಡಿಸಿ ದಾಖಲೆ ಬರೆದರು.ವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.
ನಾಯಕ ತೆಂಬಾ ಬವುಮಾ (8) ವಿಕೆಟ್ ಬೇಗನೇ ನಷ್ಟವಾದರೂ ದ್ವಿತೀಯ ವಿಕೆಟ್ಗೆ ಡಿಕಾಕ್ ಹಾಗೂ ವ್ಯಾನ್ಡರ್ಸಾನ್ ದ್ವಿಶತಕದ ಜೊತೆಯಾಟ (204) ಕಟ್ಟಿದರು. ಡಿಕಾಕ್ 84 ಎಸೆತಗಳಲ್ಲಿ 12 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 100 ರನ್ ಗಳಿಸಿದರು. ಮತ್ತೊಂದೆಡೆ 110 ಎಸೆತಗಳನ್ನು ಎದುರಿಸಿದ ವ್ಯಾನ್ಡರ್ಸಾನ್ 13 ಬೌಂಡರಿ ಹಾಗೂ ಎರಡು ಸಿಕ್ಸರ್ಗಳಿಂದ 108 ರನ್ ಗಳಿಸಿದರು.
ಕೊನೆಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮಾರ್ಕರಮ್ 49 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. 54 ಎಸೆತಗಳನ್ನು ಎದುರಿಸಿದ ಮಾರ್ಕರಮ್ ಇನಿಂಗ್ಸ್ನಲ್ಲಿ 14 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 106 ರನ್ ಗಳಿಸಿದರು. ಹೆನ್ರಿಚ್ ಕ್ಲಾಸೆನ್ 32 ಹಾಗೂ ಡೇವಿಡ್ ವಾರ್ನರ್ ಅಜೇಯ 39 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು.
ಇದು ವಿಶ್ವಕಪ್ನಲ್ಲಿ ದಾಖಲಾದ ಅತಿ ವೇಗದ ಶತಕವಾಗಿದೆ. ಹಾಗೆಯೇ ವಿಶ್ವಕಪ್ನಲ್ಲಿ ತಂಡವೊಂದು ಪೇರಿಸಿದ ಬೃಹತ್ ಮೊತ್ತ ಕೂಡ ಆಗಿದೆ.