ಸುಳ್ಯ: ಕೆಥೋಲಿಕ್ ಶಿಕ್ಷಣ ಸಂಸ್ಥೆಗಳಲ್ಲಿ ಎರಡನೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯು ಕಳೆದ 25 ವರ್ಷಗಳಲ್ಲಿ ಮೌಲ್ಯಯುತ ಶಿಕ್ಷಣವನ್ನು ನೀಡುವ ಮೂಲಕ ಎಲ್ಲರ ಗೌರವಕ್ಕೆ ಪಾತ್ರವಾಗಿದೆ. ಈ ಶಾಲೆಯು ಶಿಕ್ಷಣ ಕ್ಷೇತ್ರದ ಹೆಮ್ಮೆಯಾಗಿ ಬೆಳೆದಿದೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಅತಿ ವಂದನೀಯ ಡಾ.ಪೀಟರ್ ಪೌಲ್ ಸಾಲ್ದಾನ ಹೇಳಿದ್ದಾರೆ.
ಸುಳ್ಯದ ಬೀರಮಂಗಲದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ

ಬೆಳ್ಳಿ ಹಬ್ಬ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾರಂಭದ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೆಥೋಲಿಕ್ ಶಿಕ್ಷಣ ಸಂಸ್ಥೆಗಳು
ಗುಣ ಮಟ್ಟದ ಶಿಕ್ಷಣದ ಜತೆಗೆ ಪ್ರೀತಿ, ಶಿಸ್ತು, ಸಮಾನತೆ, ಸಹಬಾಳ್ವೆ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯಗಳನ್ನು ಮಾಡುತಿದೆ. ಆದುದರಿಂದ ಇಲ್ಲಿ ಶಿಕ್ಷಣ ಪಡೆದವರು ಉನ್ನತ ಸ್ಥಾನಕ್ಕೇರುವುದರ ಜೊತೆಗೆ ಶಿಕ್ಷಣ ಸಂಸ್ಥೆಗಳು ಬೆಳೆದು ಎಲ್ಲರ ಪ್ರೀತಿ ಗೌರವಕ್ಕೆ ಪಾತ್ರವಾಗಿದೆ ಎಂದು ಅವರು ಹೇಳಿದರು.
ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಫಾ.ವಿಕ್ಟರ್ ಡಿಸೋಜ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್. ಯು.ಕೆ., ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಸಂತ ಜೋಸೆಫ್ ಶಾಲೆಯ ಸ್ಥಾಪಕರಾದ ಫಾ.ಎಲಿಯಾಸ್ ಡಿಸೋಜ, ಶಾಲೆಯ ಮಾಜಿ ಸಂಚಾಲಕರು ಹಾಗೂ ಸಿ.ಒ.ಡಿ.ಪಿ ಮಂಗಳೂರು ಇದರ ಕಾರ್ಯದರ್ಶಿ ಫಾ.ವಿನ್ಸೆಂಟ್ ಡಿಸೋಜ, ಬೆಂಗಳೂರು ಆರ್ಎಫ್ಟಿಎಸ್ನ ಪ್ರೊವಿನ್ಸಿಯಲ್ ಸುಪೀರಿಯರ್ ಸಿಸ್ಟರ್ ಮೇರ್ಸಿ ಕುಟ್ಟಿ, ಶಾಲೆಯ

ಮಾಜಿ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಬಿನೋಮ ಚಾಕೋ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತಾ, ಸಂತ ಬ್ರಿಜಿಡ್ಸ್ ಚರ್ಚ್ನ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ವಿಲ್ಯಂ ಲಸ್ರಾದೋ, ಪಾಲನಾ ಸಮಿತಿಯ ಉಪಾಧ್ಯಕ್ಷ ನವೀನ್ ಮಚ್ಚಾದೋ, ಕಾರ್ಯದರ್ಶಿ ಜೂಲಿಯಾನ ಕಾಸ್ತಾ ,ರಜತ ಮಹೋತ್ಸವ ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿ ಡಾ.ಅನುರಾಧಾ ಕುರುಂಜಿ, ಪಿಟಿಐ ಉಪಾಧ್ಯಕ್ಷ ಹಾಗೂ ರಜತ ಸಂಭ್ರಮ ಸಮಿತಿಯ ಸಂಚಾಲಕ ಹೇಮನಾಥ ಬಿ, ಪಿಟಿಐ ಉಪಾಧ್ಯಕ್ಷರಾದ ಶಶಿಧರ ಎಂ.ಜೆ, ಪ್ರಬೋದ್ ಶೆಟ್ಟಿ ಮೇನಾಲ ಅಲುಮ್ನಿ ಕಮಿಟಿ ಅಧ್ಯಕ್ಷ ರಾಹುಲ್ ಜಿ.ದಾಸ್, ಕಾರ್ಯದರ್ಶಿ ಆದರ್ಶ್ ಎಸ್.ಪಿ, ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಹಿಮಾಂಶು ಬಿ.ಸಿ ಪ್ರಾಥಮಿಕ ಶಾಲಾ

ವಿದ್ಯಾರ್ಥಿ ನಾಯಕ ಲಕ್ಷ್ಯಜಿತ್ ಜಿ.ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಫಾ.ವಿಕ್ಟರ್ ಡಿಸೋಜ ಸ್ವಾಗತಿಸಿದರು.ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಮೇರಿ ಸ್ಟೆಲ್ಲಾ ವರದಿ ವಾಚಿಸಿದರು.ಸಮಾರಂಭದಲ್ಲಿ ಬೆಳ್ಳಿ ಹಬ್ಬದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ರಾಷ್ಟ್ರ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಹಾಗೂ ಪ್ರತಿಭಾ ಕಾರಂಜಿಯಲ್ಲಿ ಸಾಧನೆ ಮಾಡಿದ, ಎಸ್ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳನ್ನು ಸಿಸ್ಟರ್ಗಳನ್ನು, ಬೆಳ್ಳಿ ಹಬ್ಬ ಸಮಿತಿ ಪದಾಧಿಕಾರಿಗಳು, ಅಲುಮ್ನಿ ಅಸೋಸಿಯೇಷನ್ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
