ಕಾರವಾರ: ಶಿರೂರು ಗುಡ್ಡಕುಸಿತದಲ್ಲಿ ಮೃತಪಟ್ಟ ಕೋಝಿಕೋಡ್ ಕಣ್ಣಾಡಿಕಲ್ನ ಲಾರಿ ಚಾಲಕ ಅರ್ಜುನ್ನ ಮೃತದೇಹವನ್ನು ಸಂಬಂಧಿಕರಿಗೆ ಇ.ದಜ ಹಸ್ತಾಂತರ ಮಾಡಲಾಯಿತು.
ಅರ್ಜುನ್ ಸಹೋದರಿಯ ಪತಿ ಜಿತಿನ್, ಸಹೋದರ ಅಭಿಜಿತ್ ಅವರು ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಮೃತದೇಹವನ್ನು ಆಂಬುಲೆನ್ಸ್ ಮೂಲಕ
ಕೋಝಿಕೋಡ್ಗೆ ಕೊಂಡೊಯ್ಯಲಿದ್ದಾರೆ. ಕಾರವಾರ ಶಾಸಕ ಸತೀಶ್ ಕೃಷ್ಣ ಸೆಯಿಲ್, ಮಂಚೇಶ್ವರಂ ಶಾಸಕ ಎ.ಕೆ.ಎಂ. ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು. ಶಾಸಕ ಸತೀಶ್ ಸೈಲ್ ಅವರು ಅರ್ಜುನ್ ಮನೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ನಾಳೆ ಬೆಳಗ್ಗೆ ಆರು ಗಂಟೆಯ ವೇಳೆಗೆ ಆಂಬುಲೆನ್ಸ್ ಕನ್ನಾಡಿಕ್ಕಲ್ ತಲುಪಲಿದೆ. ಇದಕ್ಕೂ ಮುನ್ನ ಅರ್ಜುನ್ ಮೃತದೇಹದ ಡಿಎನ್ಎ ಪರೀಕ್ಷೆಯಲ್ಲಿ ಅರ್ಜುನ್ ಮೃತದೇಹ ಎಂದು ದೃಢಪಡಿಸಲಾಗಿದೆ. ಮೃತದೇಹವನ್ನು ಪೋಸ್ಟ್ಮೋರ್ಟಂ ಮತ್ತಿತರ ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಗಂಗಾವಳಿ ನದಿಯಲ್ಲಿ ಪತ್ತೆಯಾದ ಲಾರಿ ಮತ್ತು ಮೃತದೇಹ ಅರ್ಜುನ್ನದ್ದೇ ಎಂದು ಖಚಿತವಾಗಿದ್ದರೂ, ನಾಪತ್ತೆಯಾಗಿ 72ನೇ ದಿನ ಮೃತದೇಹ ಪತ್ತೆಯಾದ ಕಾರಣ
ಕಾನೂನಿನ ಅನ್ವಯ ಡಿಎನ್ಎ ಪರಿಶೀಲನೆ ನಡೆಸಿ ದೃಢೀಕರಿಸಲಾಗಿದೆ. ಕರ್ನಾಟಕ ಸರ್ಕಾರ ಘೋಷಿಸಿರುವ ಐದು ಲಕ್ಷ ರೂಪಾಯಿ ಪರಿಹಾರವನ್ನು ಅರ್ಜುನ್ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು.
ಅರ್ಜುನ್ನ ಲಾರಿಯಲ್ಲಿದ್ದ ವಸ್ತುಗಳನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿದೆ.ಅರ್ಜುನ್ ವಾಚ್, ಚಪ್ಪಲಿ, ಮೊಬೈಲ್ ಫೋನ್ಗಳು, ಪ್ರಶರ್ ಕುಕ್ಕರ್, ಸ್ಟೀಲ್ ಪಾತ್ರೆಗಳು, ಮಗನ ಆಟಿಕೆ, ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಮುಂತಾದವುಗಳು ಲಾರಿಯ ಕ್ಯಾಬಿನಿನಿಂದ ಪತ್ತೆಯಾಗಿತ್ತು.