ಸುಳ್ಯ:ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಡಾ.ಎ.ಎನ್.ಕುಮಾರ್ ಅವರು ನಡೆಸಿಕೊಟ್ಟರು. ಬಿ ಟೆಕ್, ಎಮ್ ಟೆಕ್ ಪದವೀಧರರಾಗಿದ್ದು ಐಐಟಿ ಮುಂಬೈಯಲ್ಲಿ ಅಧ್ಯಯನವನ್ನು ನಡೆಸಿ

ಡಾಕ್ಟರೇಟ್ ಪದವಿಯನ್ನು ಪಡೆದಿರುವ ಡಾ.ಎ.ಎನ್.ಕುಮಾರ್ ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ಹಂಚಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಗುರಿ ನಿರ್ಧಾರ ಮತ್ತು ಶಿಸ್ತಿನ ಜೀವನವನ್ನು ಯಾವ ರೀತಿ ನಡೆಸಬೇಕೆಂದು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಸ್ವರ್ಣಕಲಾ . ಎ.ಎಸ್ ಸ್ವಾಗತಿಸಿ ಪ್ರಾಂಶುಪಾಲರಾದ ದಯಾಮಣಿ.ಕೆ ವಂದಿಸಿದರು. ಸಂಸ್ಥೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.