ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವನಸುಮ ವನವಾಸಿ ವಿದ್ಯಾರ್ಥಿ ನಿಲಯ ಅಡ್ಕಾರ್ ಇಲ್ಲಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೊಂಟಡ್ಕ ವಹಿಸಿದ್ದರು. ಜೇಸಿಐ ವಲಯ 15ರ
ಉಪಾಧ್ಯಕ್ಷ ಜಿತೇಶ್ ಪಿರೆರಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು. ಅತಿಥಿಗಳಾಗಿ ವನವಾಸಿ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಡಾ. ಚಂದ್ರಶೇಖರ ಭಟ್, ಜೇಸಿಐ ಸುಳ್ಯ ಪಯಸ್ವಿನಿ ಪೂರ್ವಾಧ್ಯಕ್ಷರಾದ ಚೆನ್ನಕೇಶವ ಜಾಲ್ಸೂರು,ಕಾರ್ಯದರ್ಶಿ ತಾರ ಮಾಧವ ಚೂಂತಾರು ಉಪಸ್ಥಿತರಿದ್ದರು.ನಿಲಯ ಪಾಲಕಿ ವೀರಮ್ಮ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನಿಲಯದ ಮಾತೃಮಂಡಳಿ ಘಟಕದ ಸದಸ್ಯೆ ವೇದಾ ಶೆಟ್ಟಿ ವಂದಿಸಿದರು.








