ಸುಳ್ಯ:ರೋಟರಿ ಕ್ಲಬ್ ಬೆಳ್ಳಾರೆ ಟೌನ್ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.25ರಂದು ಸಂಜೆ 7ಕ್ಕೆ ಬೆಳ್ಳಾರೆಯ ದೇವಿ ಹೈಟ್ಸ್ನಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ ಆರಿಫ್ ಬೆಳ್ಳಾರೆ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಜಿಲ್ಲಾ ಗವರ್ನರ್ ಎ. ಆರ್. ರವೀಂದ್ರ ಭಟ್ ಪದಗ್ರಹಣ ನೆರವೇರಿಸುವರು. ವಲಯದ ಸಹಾಯಕ ಗವರ್ನರ್ ಆನಂದ ಖಂಡಿಗ, ರೋನಲ್ ಲೆಫ್ಟಿನೆಂಟ್, ಚಂದ್ರಶೇಖರ ರೈ ಬಜನಿ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನೂತನ ಪದಾಧಿಕಾರಿಗಳು: ನೂತನ ಅಧ್ಯಕ್ಷರಾಗಿ ಆರಿಫ್ ಬೆಳ್ಳಾರೆ, ನಿಕಟಪೂರ್ವಾಧ್ಯಕ್ಷರಾಗಿ ವಿಶ್ವನಾಥ ಕೆ., ನಿಯೋಜಿತ ಅಧ್ಯಕ್ಷರಾಗಿ ಗಣೇಶ್ ಕುಕ್ಕುತಡಿ, ಕಾರ್ಯದರ್ಶಿಯಾಗಿ ಪ್ರಶಾಂತ್ ತಂಟೆಪ್ಪಾಡಿ, ಕೋಶಾಧಿಕಾರಿಯಾಗಿ ರವೀಂದ್ರ ಗೌಡ, ಸಾರ್ಜೆಂಟ್ ಅಟ್ ಆರ್ಮ್ಸ್ ಆಗಿ ನವೀನ್ಕುಮಾರ್ ರೈ ತಂಬಿನಮಕ್ಕಿ, ಲರ್ನಿಂಗ್ ಫೆಸಿಲಿಟೇಟರ್ ಆಗಿ ಪ್ರಭಾಕರ ಆಳ್ವ, ಕ್ಲಬ್ ಅಡ್ಮಿನಿಸ್ಟ್ರೇಷನ್ ಚೇರ್ಮೆನ್ ಆಗಿ ವಿನಯಕುಮಾರ್, ರೋಟರಿ ಫೌಂಡೇಶನ್ ಚೇರ್ಮೆನ್ ಆಗಿ ಶಶಿಧರ್, ಮೆಂಬರ್ಶಿಪ್ ಡೆವಲಪ್ಮೆಂಟ್ ಚೇರ್ಮೆನ್ ಆಗಿ ಎ.ಕೆ. ಮಣಿಯಾಣಿ, ಪಬ್ಲಿಕ್ ರಿಲೇಶನ್ ಚೇರ್ಮೆನ್ ಆಗಿ ಪದ್ಮನಾಭ ಬೀಡು, ಸರ್ವಿಸ್ ಪ್ರಾಜೆಕ್ಟ್ ಚೇರ್ಮೆನ್ ಆಗಿ ಚಂದ್ರಶೇಖರ ರೈ ಬಜನಿ, ಸಂಘ ಸೇವೆ ನಿರ್ದೇಶಕರಾಗಿ ಧನರಾಜ್ ಕುಮಾರ್, ಸಮುದಾಯ ಸೇವೆ ನಿರ್ದೇಶಕರಾಗಿ ಬಾಲಕೃಷ್ಣ ಮಡ್ತಿಲ, ವೃತ್ತಿ ಸೇವೆ ನಿರ್ದೇಶಕರಾಗಿ ಹನೀಫ್ ಬೆಳ್ಳಾರೆ, ಅಂತಾರಾಷ್ಟ್ರೀಯ ಸೇವೆ ನಿರ್ದೇಶಕರಾಗಿ ನಟರಾಜನ್, ಯುವಜನ ಸೇವೆ ನಿರ್ದೇಶಕರಾಗಿ ವೀರನಾಥ ಆಯ್ಕೆಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ವಿಶ್ವನಾಥ ಕೆ, ಪ್ರಶಾಂತ್ ತಂಟೆಪ್ಪಾಡಿ,ರವೀಂದ್ರ ಗೌಡ,ಶಶಿಧರ್ ಬಿ.ಕೆ, ಚಂದ್ರಶೇಖರ ರೈ ಬಜಿನಿ, ಎ.ಕೆ. ಮಣಿಯಾಣಿ, ಪದ್ಮನಾಭ ಬೀಡು, ವಿನಯಕುಮಾರ್ ಉಪಸ್ಥಿತರಿದ್ದರು.








