ಸುಳ್ಯ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಸುಳ್ಯ ಶಾಖೆಯ ವತಿಯಿಂದ ವೈದ್ಯರ ದಿನಾಚರಣೆ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಯಿತು.ಐಎಂಎ ಸುಳ್ಯ ಶಾಖೆಯ ಅಧ್ಯಕ್ಷೆ ಡಾ. ಐಶ್ವರ್ಯ ಕೆ.ಸಿ. ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾದ
ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷೆ ಡಾ.ನಾಜ್ ಜಹಾನ್ ಶೇಖ್ ಉದ್ಘಾಟಿಸಿದರು. ಐಎಂಎ ಸುಳ್ಯದ ಸ್ಥಾಪಕ ಅಧ್ಯಕ್ಷ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಮುಖ್ಯ ಅತಿಥಿಯಾಗಿದ್ದರು.
ಕಾರ್ಯಕ್ರಮದಲ್ಲಿ, ಐಎಂಎ ಸುಳ್ಯದ ಮಾಜಿ ಅಧ್ಯಕ್ಷೆ ಡಾ. ಸಾಯಿ ಗೀತಾ ಜ್ಞಾನೇಶ್, ಡಿಎಂ ಮೆಡಿಕಲ್ ಆಂಕೊಲಜಿಸ್ಟ್, ಪರ್ವತಾರೋಹಿ, ಈಜುಪಟು ಡಾ. ಗುರುಪ್ರಸಾದ್ ಭಟ್ ಅವರನ್ನು ಸನ್ಮಾನಿಸಲಾಯಿತು. ಡಾ. ಸಿ. ರಾಮಚಂದ್ರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಐಎಂಎ ಸುಳ್ಯ ಕಾರ್ಯದರ್ಶಿ ಡಾ. ಗೀತಾ ದೊಪ್ಪ ವರದಿ ವಾಚಿಸಿದರು.ಉಪಾಧ್ಯಕ್ಷೆ ಡಾ. ಅರುಣ ಸ್ವಾಗತಿಸಿ ಡಾ. ಅಪೂರ್ವ ವಂದಿಸಿದರು.
ಐಎಂಎ ಸದಸ್ಯರಿಗೆ ಮತ್ತು ಕುಟುಂಬಕ್ಕೆ ವಿವಿಧ ಆಟಗಳು ಹಾಗೂ ಮನರಂಜನಾ ಕಾರ್ಯಕ್ರಮ, ಸಸಿ ನೆಡುವ ಕಾರ್ಯಕ್ರಮ ನಡೆಯಿತು.








