ಸುಳ್ಯ:ಭಾರತೀಯ ತೀಯ ಸಮಾಜ ವಲಯ ಸಮಿತಿಯ
ವಾರ್ಷಿಕ ಮಹಾಸಭೆ ನಡೆಯಿತು.ವಲಯ ಸಮಿತಿ ಅಧ್ಯಕ್ಷ ಪವಿತ್ರನ್ ಗುಂಡ್ಯ ಅಧ್ಯಕ್ಷತೆ ವಹಿಸಿದ್ದರು.ಜತೆ ಕಾರ್ಯದರ್ಶಿ ವಿಜಯಲಕ್ಷ್ಮಿ ಬೀರಮಂಗಲ ವಾರ್ಷಿಕ ವರದಿ ವಾಚಿಸಿದರು.ಕೋಶಾಧಿಕಾರಿ ಸುನಿಲ್ ಕುಮಾರ್ ಪರಿವಾರಕಾನ ಲೆಕ್ಕ ಪತ್ರ ಮಂಡಿಸಿದರು. ಬಳಿಕ
ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹರಿಶ್ಚಂದ್ರ ಕೇಪುಳಕಜೆ, ಕಾರ್ಯದರ್ಶಿಯಾಗಿ ಭಾಸ್ಕರ ಅಡ್ಕಾರು, ಕೋಶಾಧಿಕಾರಿಯಾಗಿ ಪ್ರದೀಪ್. ಕೆ ಅರಂತೋಡು ಆಯ್ಕೆಯಾದರು.ಗೌರವ ಸಲಹೆಗಾರರಾಗಿ ಮಾಜಿ ಅಧ್ಯಕ್ಷ ಪವಿತ್ರನ್ ಗುಂಡ್ಯ,ಉಪಾಧ್ಯಕ್ಷರಾಗಿ ಗೋಪಾಲ ಗಾಂಧಿನಗರ, ಶಿಲ್ಪಾಸುದೇವ್ ಜಯನಗರ,ಜತೆಕಾರ್ಯದರ್ಶಿಯಾಗಿ ದಯಾನಂದ ವಿನೋಬನಗರ, ರಜನಿ ಗೋರಡ್ಕ,ಸದಸ್ಯರಾಗಿ

ಹರಿಶ್ಚಂದ್ರ ಕೇಪುಳಕಜೆ, ಭಾಸ್ಕರ ಅಡ್ಕಾರು, ಪ್ರದೀಪ್.
ಸುನಿಲ್ ಕುಮಾರ್ ಪರಿವಾರಕಾನ, ಪುರುಷೋತ್ತಮ ನಾವೂರು, ಜಯಪ್ರಕಾಶ್ ಅರಂಬೂರು, ವಿಜಯಲಕ್ಷ್ಮಿ ಬೀರಮಂಗಲ, ನಾಗೇಶ್ ತಳೂರು, ಶ್ರೀಧರ ಕಡೆಪಾಲ, ಜಗದೀಶ್ ಬೇರ್ಪಡ್ಕ, ರಂಜಿತ್ ಅಡ್ಕಾರು, ಶ್ರೀಧರ ಕೂಳಿಯಡ್ಕ , ಗಂಗಾಧರ ಬಡ್ಡಡ್ಕ, ಭವಾನಿ ಚಿಟ್ಟನ್ನೂರು,ಶ್ರಿಜಿತ್ ಅರಂತೋಡು ಭಾನುಪ್ರಕಾಶ್ ಕೊಡಂಕೇರಿ, ನಿತಿನ್ ಗುಂಡ್ಯ ರಾಧಾಕೃಷ್ಣ ಕಾಂತಮಂಗಲ ಯತಿರಾಜ್ ಮಾವಂಜಿ ಆಯ್ಕೆಯಾದರು.ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಲಯ ಸಮಿತಿಯ ಜತೆ ಕಾರ್ಯದರ್ಶಿ ವಿಜಯಲಕ್ಷ್ಮಿ ಬೀರಮಂಗಲ ರವರು ಸ್ವಾಗತಿಸಿ,ಭಾಸ್ಕರ ಅಡ್ಕಾರು ರವರು ಕಾರ್ಯಕ್ರಮ. ನಿರೂಪಿಸಿದರು.ನಗರ ಸಮಿತಿ ಅಧ್ಯಕ್ಷ ಸುರೇಶ್ ಕುತ್ತಮೊಟ್ಟೆ ವಂದಿಸಿದರು.







































