ಸುಳ್ಯ:ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಮೇಕೆ(ಆಡು) ವಿತರಣೆ ಕಾರ್ಯಕ್ರಮ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆಯಿತು. ಪರಿಶಿಷ್ಟ ಪಂಗಡದವರ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಕುರಿ/ಮೇಕೆ ಘಟಕಕ್ಕೆ ಅರ್ಜಿ ಸಲ್ಲಿಸಿ ಸೌಲಭ್ಯಕ್ಕೆ
ಆಯ್ಕೆಯಾದ ಫಲಾನುಭವಿಗಳಿಗೆ ಎರಡು ಹೆಣ್ಣು ಮತ್ತು ಒಂದು ಗಂಡು ಸೇರಿ 3 ಮೇಕೆಗಳನ್ನು ವಿತರಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಫಲಾನುಭವಿಗಳಿಗೆ ಮೇಕೆಗಳನ್ನು ವಿತರಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಯಕ ನಿರ್ದೇಶಕ ಕೃಷ್ಣ.ಬಿ,
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು, ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಪ್ರವೀಣ್ ಕುಮಾರ್,ಸಿಬ್ಬಂದಿಗಳಾದ ಸ್ಮಿತಾ, ಚೈತ್ರ, ರಜನಿ, ನಂದಿನಿ, ಪ್ರಮುಖರಾದ ಪ್ರದೀಪ್ ಮನವಳಿಕೆ, ಗಣೇಶ್ ಉದನಡ್ಕ, ಸುರೇಶ್ ದೇಂತಾರು, ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.







































