ಸುಳ್ಯ:ಅಗಲಿದ ತೂಗು ಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ‘ಗಿರೀಶ ಸ್ಮೃತಿ ಸೇತು’ ನುಡಿನಮನ ಸುಳ್ಯದ ಕುಂಭಕೋಡು ಕಸ್ತೂರಿ ಅಚ್ಯುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.
”ಗಿರೀಶ ಸ್ಮೃತಿ ಸೇತು” – ನುಡಿ ನಮನ ಕಾರ್ಯಕ್ರಮದಲ್ಲಿ
ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿತರ ಪ್ರಮುಖರು ಪುಷ್ಪ ನಮನ ಸಲ್ಲಿಸಿದರು.ಪ್ರಮುಖರಾದ

ಕುಮಾರಸ್ವಾಮಿ ತೆಕ್ಕುಂಜ, ಪಿ. ರಾಮಚಂದ್ರ ಆಗ್ರೋ,ಬಯಂಬು ಭಾಸ್ಕರ್ ರಾವ್, ಎಂ.ಬಿ.ಸದಾಶಿವ, ಡಾ. ಚಂದ್ರಶೇಖರ ದಾಮ್ಲೆ, ಫಾ.ಅಲ್ವಿನ್ ಡಿ.ಕುನ್ಹಾ, ಕೆ.ಎಂ.ಮುಸ್ತಫಾ, ಟಿ.ಎಂ. ಶಹೀದ್ ತೆಕ್ಕಿಲ್, ಲತಾ ಮಧುಸೂದನ್, ಡಾ.ಯು.ಪಿ.ಶಿವಾನಂದ, ವೇದ ಮೂರ್ತಿ ಗಿರಿಧರ ಭಟ್ ನುಡಿನಮನ ಸಲ್ಲಿಸಿದರು. ಪ್ರಕಾಶ್ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.
ಸಾವಿರಾರು ಮಂದಿ ಆಗಮಿಸಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಮನ ಸಲ್ಲಿಸಿದರು.








