ತಿರುವನಂತಪುರ:ವಿಶ್ವಕಪ್ ಫುಟ್ಬಾಲ್ ಫೖನಲ್ ಹಿನ್ನೆಲೆಯಲ್ಲಿ ನಾಳೆ (ಸೋಮವಾರ) ಕೇರಳ ರಾಜ್ಯದ ಶೖಕ್ಷಣಿಕ ಸಂಸ್ಥೆಗಳಿಗೆ ಸರಕಾರ ರಜೆ ಘೋಷಿಸಿದೆ. ಕಾಲೇಜುಗಳು ಸೇರಿ ಎಲ್ಲಾ ಶೖಕ್ಷಣಿಕ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ. ಇಂದು
ಮಧ್ಯರಾತ್ರಿ 12.30 ರಿಂದ ಅರ್ಜಂಟೀನಾ ಮತ್ತು ಸ್ಪೇನ್ ತಂಡಗಳ ಮಧ್ಯೆ ಫೖನಲ್ ಪಂದ್ಯ ನಡೆಯಲಿದೆ. ಫೖನಲ್ ಪಂದ್ಯ ನಡುರಾತ್ರಿಯಿಂದ ಮುಂಜಾನೆ ತನಕ ನಡೆಯಲಿರುವುದರಿಂದ ನಾಳೆ ರಜೆ ಸಾರಲಾಗಿದೆ. ಕೇರಳದಲ್ಲಿ ಪುಟ್ಬಾಲ್ ಜ್ವರ ಹೆಚ್ಚಾಗಿದ್ದು ಅರ್ಜೆಂಟೀನಾ, ಸ್ಪೇನ್ ತಂಡಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.








