ಸುಳ್ಯ:ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಸುಳ್ಯ ಕರಯೋಗಂನ ಮಹಾಸಭೆ ಕರಯೋಗಂ ಕಚೇರಿಯಲ್ಲಿ ನಡೆಯಿತು.ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೃಷ್ಣನ್ ನಾಯರ್ ಕುತ್ತಮೊಟ್ಟೆ ಪುನರಾಯ್ಕೆಯಾದರು. ಮಹಿಳಾ ಘಟಕದ ಅಧ್ಯಕ್ಷರಾಗಿ ಪುಷ್ಪಾ.ಡಿ.ಪ್ರಸಾದ್ ಕಾನತ್ತೂರ್ ಆಯ್ಕೆಯಾದರು. ಕರಯೋಗಂ
ಕಾರ್ಯದರ್ಶಿಯಾಗಿ ಶಶಿಧರನ್ ನಾಯರ್ ಉಬರಡ್ಕ, ಕೋಶಾಧಿಕಾರಿಯಾಗಿ ಪ್ರಭಾಕರನ್ ನಾಯರ್ ಸ್ವಾಗತ್ ಆಯ್ಕೆಯಾದರು.ಉಪಾಧ್ಯಕ್ಷರಾಗಿ ದುರ್ಗಾಕುಮಾರ್ ನಾಯರ್ಕೆರೆ, ಸಹ ಕಾರ್ಯದರ್ಶಿಯಾಗಿ ಪ್ರಭಾಕರನ್ ನಾಯರ್ ಸಿ.ಹೆಚ್., ಸಹ ಕೋಶಾಧಿಕಾರಿಯಾಗಿ ವಿಶ್ವನಾಥನ್ ನಾಯರ್, ಬೋರ್ಡ್ ಮೆಂಬರ್ಗಳಾಗಿ

ಕೃಷ್ಣನ್ ನಾಯರ್ ಕುತ್ತಮೊಟ್ಟೆ
ಬಾಸ್ಕರನ್ ನಾಯರ್, ಬಾಲಕೃಷ್ಣನ್ ನಾಯರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪದ್ಮನಾಭನ್ ನಾಯರ್ ಮಧುವನ, ಮಣಿಕಂಠನ್ ನಾಯರ್ ಹಾಸ್ಪಾರೆ, ಮಧುಸೂಧನ್ ನಾಯರ್ ಉಬರಡ್ಕ, ಚಂದ್ರಶೇಖರ ನಾಯರ್ ಉಬರಡ್ಕ, ಚಂದ್ರಶೇಖರ್ ನಾಯರ್ ಸುಬ್ರಹ್ಮಣ್ಯ, ಜನಾರ್ಧನ್ ನಾಯರ್ ಅರಂತೋಡು, ದಾಕ್ಷಾಯಿಣಿ ಮಧುವನ, ಶಕುಂತಲಾ ಕೃಷ್ಣನ್ ಕುತ್ತಮೊಟ್ಟೆ, ಅಭಿನಂದನ್ ನಾಯರ್, ಜನಾರ್ಧನ್ ನಾಯರ್ ಕಾಟೂರು, ಶಶಿಧರ ಪಿಳ್ಳೆ, ಹರಿದಾಸ್ ಪಾಲಡ್ಕ ಆಯ್ಕೆಗೊಂಡರು.

ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಪ್ರತಿಭಾ ದುರ್ಗಾಕುಮಾರ್, ಕೋಶಾಧಿಕಾರಿಯಾಗಿ ಶೈಲಜಾ ಜಯರಾಜ್ ನೀರಬಿದಿರೆ, ಉಪಾಧ್ಯಕ್ಷರಾಗಿ ವಾಣಿ ರಮೇಶ್, ಸಹ ಕೋಶಾಧಿಕಾರಿಯಾಗಿ ಸರಳ ಶಶಿಧರನ್, ಸಹ ಕೋಶಾಧಿಕಾರಿಯಾಗಿ ನಿಶಾ ಮಣಿಕಂಠನ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ

ಪುಷ್ಪಾ ಡಿ ಪ್ರಸಾದ್
ಬಿಂದು ಕಾಟೂರು, ಶ್ರೀಕಲಾ ಬಾಲಕೃಷ್ಣನ್, ಸುನಿತಾ ಮಧುವನ, ಜ್ಯೋತಿ ಮಧುಸೂಧನ್, ವೀಣಾ ಪ್ರಭಾಕರ್, ದಿವ್ಯ ಗಣೇಶ್, ಸುಧಾ ಜನಾರ್ಧನ್, ಸುಧಾ ಚಂದ್ರಮೋಹನನ್, ಅಂಬಿಕಾ ಚಂದ್ರಶೇಖರನ್, ಭವಾನಿ ನಾಯರ್ ಮುಂಡಾತ್, ಶ್ರೀಜಿಶ ಚಂದ್ರಶೇಖರ, ಶಾಂತಾ ಶ್ರೀಧರನ್ ಕೊಲ್ಲಮೊಗ್ರ ಅವರನ್ನು ಆಯ್ಕೆ ಮಾಡಲಾಯಿತು.
ಮಂಗಳೂರು ಕರಯೋಗಂ ಬೋರ್ಡ್ ಮೆಂಬರ್ಗಳಾದ ರಾಜನ್ ನಂಬಿಯಾರ್ ಚುನಾವಣಾಧಿಕಾರಿಯಾಗಿ, ವಿಜಯಕುಮಾರ್ ವೀಕ್ಷಕರಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.








