ಬೆಳ್ಳಾರೆ:ಜಿಲ್ಲಾ ಅಡಳಿತ,ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರವನ್ನು ಉದ್ಭವ್ ಶೈಕ್ಷಣಿಕ ಮತ್ತು
ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಬೆಂಗಳೂರು ನಿರ್ವಹಣೆಗಾಗಿ ಸರ್ಕಾರ ನೀಡಿದ್ದು ಬೆಳ್ಳಾರೆ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರವನ್ನು ಸ್ಥಳೀಯ ವೈದ್ಯರಾದ ಡಾ.ಕಿರಣ್ ಮತ್ತು ಉದ್ಭವ್ ಸಂಸ್ಥೆ ಸಂಪಾಜೆ ಪಿಎಚ್ಸಿ ಆಡಳಿತಾಧಿಕಾರಿಗಳು ಆದ ಪಿ.ಮಲ್ಲಿಕಾರ್ಜುನ ಇವರುಗಳು ಕೇಂದ್ರವನ್ನು ಉದ್ಘಾಟಿಸಿದರು.
ನಂತರ ಮಕ್ಕಳು ಮತ್ತು ಪೋಷಕರ ಹಾಗೂ ವೈದ್ಯರು, ಜೊತೆಗೆ ದೀಪಬೆಳಗುವ ಮುಖಾಂತರ ಪ್ರಾರಂಭಿಸಲಾಯಿತು.. ಈ ಕಾರ್ಯಕ್ರಮಕ್ಕೆ ಮಕ್ಕಳು ಮತ್ತು ಪೋಷಕರು , ಹಾಗೂ ಪಾಲನಾ ಕೇಂದ್ರ ದ ವ್ಯವಸ್ಥಾಪಕಿ ಶರ್ಮಿಳ , ಶಿಕ್ಷಕರಾದ ಸವಿತಾ, ಮುಸ್ಕಾನ್, ಕಾವ್ಯ, ಸಹಾಯಕರು
ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗದವರು.ಮಾಧವ ತಡಗ ಜೆ, ಪ್ರೇಮ್ ಬೆಳ್ಳಾರೆ ಮತ್ತಿತರರು ಭಾಗವಹಿಸಿದ್ದರು.














