ಸುಳ್ಯ: ಸುಳ್ಯಸುಳ್ಯದ ಶ್ರೀ ಶಾರದಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಜೇಸಿಐ ಸುಳ್ಯಪಯಸ್ವಿನಿ ವತಿಯಿಂದ ಜೇಸಿ ಸಪ್ತಾಹ 2023 ರ ಅಂಗವಾಗಿ ವಿದ್ಯಾರ್ಥಿನಿಯರಿಗೆ ಸಂವಹನ ಕೌಶಲ್ಯ ತರಬೇತಿಯನ್ನು ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಜೆಸಿಐ ಉಡುಪಿಯ
ಡಾ. ವಿಜಯ ನೆಗಳೂರು ತರಬೇತಿ ನೀಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದಿನೇಶ್ ಅಂಬೆಕಲ್ಲು, ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸ್ವರ್ಣಕಲಾ.ಎ.ಎಸ್. ಜೆ ಸಿ ಐ ಅಧ್ಯಕ್ಷರಾದ ನವೀನ್ ಕುಮಾರ್, ಗುರುರಾಜ್ ಅಜ್ಜಾವರ, ರಂಜಿತ್ ಕುಕ್ಕೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುರೇಶ್ ಕಾಮತ್ ವಂದಿಸಿದರು. ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದರು