ಸುಳ್ಯ:ಸುಳ್ಯದ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಓಣಂ ಆಚರಣೆ ನಡೆಯಿತು. ವಿದ್ಯಾರ್ಥಿಗಳು ಪೂಕಳಂ ಹಾಕಿ ಓಣಂ ನೃತ್ಯವನ್ನು ಪ್ರದರ್ಶಿಸಿದರು.ಉಪನ್ಯಾಸಕಿ ಸ್ವರ್ಣಕಲಾ.ಎ.ಎಸ್ ಅವರು ಓಣಂ ಆಚರಣೆಯ ಮಹತ್ವವನ್ನು ತಿಳಿಸಿದರು. ಪ್ರಾಂಶುಪಾಲರಾದ ದಯಾಮಣಿ.ಕೆ ಬೋಧಕ, ಬೋಧಕೇತರವೃಂದ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಓಣಂ ವಸ್ತ್ರವನ್ನು ಧರಿಸಿ ಸಂಭ್ರಮಿಸಿದರು.ಸಂಸ್ಥೆಯ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಓಣಂ ವಿಶೇಷ ಖಾದ್ಯವನ್ನು ವಿತರಿಸಲಾಯಿತು..
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.