ಸುಳ್ಯ: ಯುವ ಉದ್ಯಮಿ ಪ್ರಮೋದ್ ಕೆ. ನೇತೃತ್ವದ ಸಂಭ್ರಮ ಪೈಂಟ್ಸ್ ಈಗ ಕಡಬದಲ್ಲೂ ಲಭ್ಯ. ಸುಳ್ಯ ಕುರುಂಜಿಬಾಗ್ನಲ್ಲಿರುವ ಸ್ವಾಗತ್ ಕಾಂಪ್ಲೆಕ್ಸ್ನಲ್ಲಿರುವ ಸಂಭ್ರಮ ಪೈಂಟ್ಸ್ ನೇರವಾಗಿ ಫ್ಯಾಕ್ಟರಿಯಿಂದ ಗ್ರಾಹಕರಿಗೆ ಪೈಂಟ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಜನ
![](https://thesulliamirror.com/wp-content/uploads/2023/10/IMG-20231017-WA0006-614x1024.jpg)
ಮನ ಗೆದ್ದು ಯಶಸ್ವಿಯಾಗಿ ಮಾರುಕಟ್ಟೆಯಲ್ಲಿ ಮುನ್ನಡೆದಿದೆ. ಇದೀಗ ಸಂಸ್ಥೆಯು ಕಡಬದಲ್ಲಿ ಅ.18ರಂದು ಶುಭಾರಂಭಗೊಳ್ಳಲಿದೆ. ಕಡಬದ ಮುಖ್ಯಪೇಟೆಯಲ್ಲಿ ಸುಶಾಂತಿ ಕಾಂಪ್ಲೆಕ್ಸ್ನಲ್ಲಿ ಅ.18ರಂದು ಪೂ.11ಕ್ಕೆ ಸಂಭ್ರಮ ಪೈಂಟ್ಸ್ನ ಕಡಬ ಮಳಿಗೆ ಶುಭಾರಂಭಗೊಳ್ಳಲಿದೆ. ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕರಾದ ವೆಂಕಟ್ರಮಣ ರಾವ್ ಮಂಕುಡೆ ಅವರು ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಸಾಮಾಜಿಕ, ರಾಜಕೀಯ, ಉದ್ಯಮ ಕ್ಷೇತ್ರದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
![](https://thesulliamirror.com/wp-content/uploads/2023/10/IMG-20231017-WA0006-614x1024.jpg)