ಬೆಂಗಳೂರು: ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಬೆಂಗಳೂರಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಡಾ. ಪೂವಪ್ಪ ಕಣಿಯೂರು ರವರಿಗೆ ಗುರು ವಂದನಾ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಹೋಟೆಲ್ ಪಾರ್ಚೂನ್ ಟ್ರಿನಿಟಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಫಾರ್ಮೆಡ್ ಲಿಮಿಟೆಡ್ ಸಂಸ್ಥೆಯ ಮಾನವ ಸಂಪನ್ಮೂಲ, ತರಬೇತಿ ಹಾಗೂ ಆಡಳಿತ ವಿಭಾಗದ ಹಿರಿಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆಯವರು ತಮ್ಮ ಗುರುಗಳನ್ನು
ಸಭೆಗೆ ಪರಿಚಯಿಸಿದರು.ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿ ಇವರು ಸುದೀರ್ಘ ಕಾಲ ಉಪನ್ಯಾಸಕರಾಗಿ, ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರು. ಅವರು ಅಧ್ಯಾಪನ ವೃತ್ತಿಯ ಜೊತೆಗೆ ಅಧ್ಯಯನ ಪ್ರವೃತಿಯನ್ನು ಮೈಗೂಡಿಸಿ ಕೊಂಡವರು. ಹಾಗಾಗಿ ಅವರು ಸಂಶೋಧಕರಾಗಿ ಜಾನಪದ, ಪ್ರಾದೇಶಿಕ ಅಧ್ಯಯನ ಕೃತಿಗಳ ಕರ್ತೃ ಗಳಾಗಿ, ಸಾಹಿತ್ಯ ವಿಮರ್ಶಾ ಲೇಖಕರಾಗಿ ಗುರುತಿಸಿಕೊಳ್ಳಲು ಅವರಿಗೆ ಸಾಧ್ಯವಾಗಿದೆ ಎಂದರು
ಈ ಸಂದರ್ಭದಲ್ಲಿ ಫಾರ್ಮೆಡ್ ಲಿಮಿಟೆಡ್ನ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾದ ಇಸಾಕ್ ಮತ್ತು ರವಿಕುಮಾರ್ ಅವರು ಡಾ. ಪೂವಪ್ಪ ಕಣಿಯೂರು ಮತ್ತು ಪತ್ನಿ ಸರೋಜ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮವನ್ನು ಮಂಜುನಾಥ ಹಿರಿಯೂರು ಮತ್ತು ಪ್ರಕಾಶ್ ರವರು ಸಂಯೋಜಿಸಿದರು. ಅರವಿಂದ್ ಸ್ವಾಗತಿಸಿದರು, ರವಿಕುಮಾರ್ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ, ಆಡಳಿತ ವಿಭಾಗದ ಜನರಲ್ ಮ್ಯಾನೇಜರ್ ಆರಿಸ್ ಪೇರಡ್ಕ, ಮಾನವ ಸಂಪನ್ಮೂಲ, ವಿಭಾಗ ಅಧಿಕಾರಿಗಳಾದ ಕೃಷ್ಣಮೂರ್ತಿ,ಕಾರ್ತಿಕ್, ಚೆಲುವರಾಜು, ಶಂಕರ್ ದಿಸಾಲೆ, ಪವನ್ ಕುಮಾರ್, ರಾಧಾಕೃಷ್ಣ, ಶ್ರೀನಿವಾಸ್, ರಕ್ಷಿತ್, ಉನ್ನಿಸ್ ಗೂನಡ್ಕ, ಯತೀಶ್ ಟಿ ಡಿ ಮತ್ತಿತರರು ಪಾಲ್ಗೊಂಡಿದ್ದರು.