ರಾವಲ್ಪಿಂಡಿ: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ ಟ್ರೋಫಿಯ ಆಸ್ಟ್ರೇಲಿಯಾ ಮತ್ತು ದಕ್ಷಿಣಾ ಆಫ್ರಿಕಾ ನಡುವಣ ಪಂದ್ಯ ಮಂಗಳವಾರ ಮಳೆಯಿಂದಾಗಿ ರದ್ದಾಗಿದೆ.ಟಾಸ್ಗೂ
ಮಳೆ ಅವಕಾಶ ಕೊಡಲಿಲ್ಲ. ಮೂರು ಗಂಟೆಗಳಿಗೂ ಹೆಚ್ಚು ಕಾಲ ವಾತಾವರಣದಲ್ಲಿ ಬದಲಾವಣೆಯಾಗದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಬಿ ಗುಂಪಿನ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣಾ ಆಫ್ರಿಕಾ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡವು. ಇದರಿಂದ ಬಿ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸುವ ತಂಡಗಳ ನಿರ್ಣಯ ಇನ್ನೂ ಅತಂತ್ರವಾಗಿದೆ.