ಸುಳ್ಯ: ರಾಯಲ್ ಸ್ಟಾರ್ ಇವಿ ಸ್ಕೂಟರ್ ಶೋರೂಮ್ ಸುಳ್ಯದಲ್ಲಿ ನಾಳೆ(ಅ.20) ಶುಭಾರಂಭಗೊಳ್ಳಲಿದೆ. ಮಹಮ್ಮದ್ ಇಕ್ಬಾಲ್ ಎಲಿಮಲೆ ಹಾಗೂ ಹಾಜಿ ಇಬ್ರಾಹಿಂ ಕತ್ತರ್ ಮಾಲಕತ್ವದ ರಾಯಲ್ ಸ್ಟಾರ್ ಇವಿ ಸ್ಕೂಟರ್ ಶೋರೂಮ್ ಸುಳ್ಯ ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿ

ತಾಲೂಕು ಪಂಚಾಯತ್ ಬಳಿಯ ಮಹಿಳಾ ಸಹಕಾರಿ ಸಂಘದ ಕಟ್ಟಡದಲ್ಲಿ ನಾಳೆ ಬೆಳಿಗ್ಗೆ 9ಕ್ಕೆ ಉದ್ಘಾಟನೆಯಾಗಲಿದೆ. ಇಲೆಕ್ಟ್ರಿಕ್ ಚಾಲಿತ ಸ್ಕೂಟರ್ ಶೋ ರೂಮ್ ಇದಾಗಿದ್ದು ಸುಳ್ಯದಲ್ಲಿ ಪ್ರಥಮ ಬಾರಿಗೆ ಆರಂಭಗೊಳ್ಳುತಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 60ರಿಂದ 70 ಕಿ.ಮಿ, 80 ರಿಂದ 90 ಕಿ.ಮಿ. ಚಾಲನೆ ಮಾಡಬಹುದಾದ ವಿವಿಧ ಮಾದರಿಯ ಇಲೆಕ್ಟ್ರಿಕ್ ಸ್ಕೂಟರ್ ಲಭ್ಯವಿರಲಿದೆ. ನೋಂದಾವಣೆ ರಹಿತ, ಪರವಾನಿಗೆ ರಹಿತ ಸ್ಕೂಟರ್ ಇದಾಗಿದ್ದು ಶುಭಾರಂಭದ ಕೊಡುಗೆಯಾಗಿ ಹೆಲ್ಮೆಟ್ ಉಚಿತ ನೀಡಲಾಗುವುದು ಎಂದು ಸಂಸ್ಥೆಯ ಪಾಲುದಾರರಾದ ಇಕ್ಬಾಲ್ ಎಲಿಮಲೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.
7019325255
8884944445















