ಬೆಂಗಳೂರು: ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 11ರನ್ಗಳ ರೋಚಕ ಗೆಲುವು ದಾಖಲಿಸಿದೆ.ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಆರ್ಸಿಬಿ ತವರಿನ ಅಂಗಳದಲ್ಲಿ ಮೊದಲ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅವರ ಬಿರುಸಿನ ಅರ್ಧ ಶತಕದ ನೆರವಿನಿಂದ
ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 205 ರನ್ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ರಾಜಸ್ಥಾನ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ರಾಜಸ್ಥಾನಕ್ಕೆ ಯಸಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಸ್ಪೋಟಕ ಆರಂಭ ಒದಗಿಸಿದರು. ಆರ್ ಆರ್ ಬ್ಯಾಟರ್ಗಳು ಕೊನೆಯ ತನಕ ಬಿರುಸಿನ ಹೋರಾಟ ನಡೆಸಿದರೂ ಜೋಶ್ ಹೇಝಲ್ವುಡ್ ಅವರ ಮಾರಕ ಬೌಲಿಂಗ್ ನೆರವಿನಿಂದ ಆರ್ಸಿಬಿ ರೋಚಕ ಗೆಲುವು ದಾಖಲಿಸಿತು.
ರಾಜಸ್ಥಾನದ ಪರ ಯಶಸ್ವಿ ಜೈಸ್ವಾಲ್ ಕೇವಲ 19 ಎಸೆತಗಳಲ್ಲಿ 7 ಬೌಂಡರಿ ಹಾಗು 3 ಸಿಕ್ಸರ್ ನೆರವಿನಿಂದ 49 ರನ್ ಗಳಿಸಿ ಭರ್ಜರಿ ಆರಂಭ ನೀಡಿದರು.ವೈಭವ್ ಸೂರ್ಯವಂಶಿ 16, ನಿತೀಶ್ ರಾಣ 28, ರಿಯಾನ್ ಪರಾಗ್ 22, ಧ್ರುವ್ ಜುರೆಲ್ 47 ರನ್ ಗಳಿಸಿ ಹೋರಾಟ ನಡೆಸಿದರೂ ಗೆಲುವಿನ ದಡ ಸೇರಿಲ್ಲ. ಭುವನೇಶ್ವರ ಕುಮಾರ್ ಎಸೆದ 18 ನೇ ಓವರ್ನಲ್ಲಿ 22 ರನ್ ಸಿಡಿಸಿದ ರಾಜಸ್ಥಾನ ಬ್ಯಾಟರ್ಗಳು ಗೆಲುವಿನ ಭರವಸೆ ಮೂಡಿಸಿದರು. 19ನೇ ಓವರ್ ಎಸೆದ ಜೋಶ್ ಹೇಝಲ್ವುಡ್ ಕೇವಲ 1 ರನ್ ನೀಡಿ ಎರಡು ವಿಕೆಟ್ ಉರುಳಿಸಿ ಪಂದ್ಯವನ್ನು ಆರ್ಸಿಬಿ ಪರ ತಿರುಗಿಸಿದರು ಹೇಝಲ್ವುಡ್ 33 ರನ್ ನೀಡಿ 4 ವಿಕೆಟ್ ಉರುಳಿಸಿದರು. ಕ್ರುನಾಲ್ ಪಾಂಡ್ಯ 2 ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ಓಪನರ್ಗಳಾದ ಫಿಲ್ ಸಾಲ್ಟ್ (26) ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್ಗೆ 61 ರನ್ಗಳ ಜೊತೆಯಾಟ ಕಟ್ಟಿ ಭದ್ರ ಅಡಿಪಾಯ ಹಾಕಿಕೊಟ್ಟರು.
ಬಳಿಕ ಪಡಿಕ್ಕಲ್ ಜೊತೆಗೂಡಿದ ಕೊಹ್ಲಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಕೊಹ್ಲಿ ಹಾಗೂ ಪಡಿಕ್ಕಲ್ ದ್ವಿತೀಯ ವಿಕೆಟ್ಗೆ 95 ರನ್ಗಳ ಅಮೂಲ್ಯ ಜೊತೆಯಾಟ ಕಟ್ಟಿದರು.
ರಾಜಸ್ಥಾನ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ವಿರಾಟ್ ಮಗದೊಂದು ಆಕರ್ಷಕ ಅರ್ಧಶತಕದ ಸಾಧನೆ ಮಾಡಿದರು. ಕೊಹ್ಲಿ 42 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 70 ರನ್ ಗಳಿಸಿದರು. ಮತ್ತೊಂದೆಡೆ ಆಕ್ರಮಣಕಾರಿ ಆಟವಾಡಿದ ಪಡಿಕ್ಕಲ್ ಅರ್ಧಶತಕದ ಸಾಧನೆ ಮಾಡಿದರು. ಆದರೆ ಫಿಫ್ಟಿ ಬೆನ್ನಲ್ಲೇ ಪಡಿಕ್ಕಲ್ ಔಟ್ ಆದರು. 27 ಎಸೆತಗಳಲ್ಲಿ ನಾಲ್ಕು ಬೌಂಡಿರಿ ಹಾಗೂ ಮೂರು ಸಿಕ್ಸರ್ಗಳಿಂದ 50 ರನ್ ಗಳಿಸಿದರು.ಇನ್ನುಳಿದಂತೆ ಟಿಮ್ ಡೇವಿಡ್ 23, ಜಿತೇಶ್ ಶರ್ಮಾ 20 ಹಾಗೂ ನಾಯಕ ರಜತ್ ಪಾಟೀದಾರ್ 1 ರನ್ ಗಳಿಸಿದರು.ಅಂತಿಮವಾಗಿ ಆರ್ಸಿಬಿ 205 ರನ್ ಪೇರಿಸಿತು.ರಾಜಸ್ಥಾನ ಪರ ಸಂದೀಪ್ ಶರ್ಮಾ ಎರಡು ವಿಕೆಟ್ ಗಳಿಸಿದರು.