ರಾಯಪುರ:ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಿಡಿಸಿದ ಅಮೋಘ ಶತಕದ ನೆರವಿನಿಂದ ಚಾಂಪಿಯನ್ನರ ಆಟವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಆರ್ಸಿಬಿ ಪ್ಲೇ ಆಫ್ ಸನಿಹಕ್ಕೆ ಬಂದಿದೆ.ಮಳೆಯ ಕಾರಣ ತಡವಾಗಿ ಆರಂಭವಾದ ಪಂದ್ಯದಲ್ಲಿ
ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿತು. ಸವಾಲಿನ ಮೊತ್ತ ಬೆನ್ನಟ್ಟಿದ ಆರ್ಸಿಬಿ 19.1 ಓವರ್ಗಳಲ್ಲಿ 4ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಿಡಿಸಿದ ಅಮೋಘ ಶತಕ ಆರ್ಸಿಬಿಗೆ ಸುಲಭ ಜಯ ತಂದಿತು.ಬೌಂಡರಿ ಸಿಕ್ಸರ್ಗಳ ಸುರಿಮಳೆಗೆರೆದು ನೆರೆದ ಪ್ರೇಕ್ಷಕರನ್ನು ರಂಜಿಸಿದ ಕೊಹ್ಲಿ ಐಪಿಎಲ್ನಲ್ಲಿ ತನ್ನ 9ನೇ ಶತಕ ಸಿಡಿಸಿದರು.
ಕೊಹ್ಲಿ 60 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 105 ರನ್ ಗಳಿಸಿದರು. ಕೊಹ್ಲಿ ಹಾಗು ಬೆಥಲ್ ಸ್ಫೋಟಕ ಆರಂಭ ನೀಡಿದರು. ಮೊದಲ ವಿಕೆಟ್ಗೆ ಇವರು 37 ರನ್ ಗಳಿಸಿದರೆ, ಎರಡನೇ ವಿಕೆಟ್ಗೆ ಕೊಹ್ಲಿ ಹಾಗು ದೇವದತ್ ಪಡಿಕಲ್ ಸೇರಿ 92 ರನ್ ಜೊತೆಯಾಟ ಕಟ್ಟಿದರು. ಬೆಥೆಲ್ 12 ಎಸೆತಗಳಲ್ಲಿ 2 ಬೌಂಡರಿ ಹಾಗೂ 1ಸಿಕ್ಸರ್ ನೆರವಿನಿಂದ 15 ರನ್ ಗಳಿಸಿದರೆ, ಪಡಿಕಲ್ 27 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ ರನ್ 39 ರನ್ ಗಳಿಸಿದರು. ನಾಯಕ ರಜತ್ ಪಾಟಿದಾರ್(11), ಟಿಮ್ ಡೇವಿಡ್(2) ಬೇಗನೆ ಮರಳಿದರು.ಜಿತೇಶ್ ಶರ್ಮ ಅಜೇಯ 8 ರನ್ ಬಾರಿಸಿದರು
ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ಅಂಗ್ಕ್ರಿಶ್ ರಘುವಂಶಿ 46 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 71 ರನ್ ಚಚ್ಚಿ ಗಮನ ಸೆಳೆದರು. ರಿಂಕು ಸಿಂಗ್ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 49 ರನ್ ಗಳಿಸಿದರು. ಕ್ಯಾಮರೂನ್ ಗ್ರೀನ್ 24 ಎಸೆತಗಳಲ್ಲಿ 3ಬೌಂಡರಿ ಹಾಗೂ1 ಸಿಕ್ಸರ್ ನೆರವಿನಿಂದ 32 ರನ್ ಗಳಿಸಿದರುನಾಯಕ ಅಜಿಂಕ್ಯ ರಹಾನೆ(19) ದ ಫಿನ್ ಅಲೆನ್ (18) ರನ್ ಗಳಿಸಿದರು.
ಟೂರ್ನಿಯಲ್ಲಿ ಈವರೆಗೆ ಆಡಿರುವ 12 ಪಂದ್ಯಗಳ ಪೈಕಿ 8ರಲ್ಲಿ ಗೆದ್ದಿರುವ ಆರ್ಸಿಬಿ 16 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿದೆ. ಗುಜರಾತ್ ಕೂಡ 16 ಅಂಕ ಪಡೆದರೂ ಉತ್ತಮ ರನ್ ರೇಟ್ ಆಧಾರದಲ್ಲಿ ಆರ್ಸಿಬಿ ಅಗ್ರ ಸ್ಥಾನದಲ್ಲಿದೆ.ಟೂರ್ನಿಯಲ್ಲಿ ಈವರೆಗೆ ಆಡಿರುವ 11ಪಂದ್ಯಗಳಲ್ಲಿ ನಾಲ್ಕರಲ್ಲಷ್ಟೇ ಗೆದ್ದಿರುವ ಕೆಕೆಆರ್ 8 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.













