ಸುಳ್ಯ:ಅಯೋಧ್ಯೆ ಶ್ರೀರಾಮಲಲ್ಲಾ ಪ್ರತಿಷ್ಠಾ ದಿನದ ಪ್ರಯುಕ್ತ ಶ್ರೀ ರಾಮೋತ್ಸವ ಕಾರ್ಯಕ್ರಮ ಹಾಗೂ ಲೋಕಕಲ್ಯಾಣಾರ್ಥವಾಗಿ ಶ್ರೀ ರಾಮಚಂದ್ರ ಕಲ್ಪೋಕ್ತ ಪೂಜಾ ಕಾರ್ಯಕ್ರಮ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಜರುಗಿತು.ಅಯೋಧ್ಯಾ

ಶ್ರೀ ರಾಮ ಪ್ರತಿಷ್ಠಾ ವಾರ್ಷಿಕೋತ್ಸವ ಸಮಿತಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡದ ವತಿಯಿಂದ ಕಾರ್ಯಕ್ರಮ ನಡೆಯಿತು.ಸಂಜೆ ಶ್ರೀ ರಾಂಪೇಟೆಯ ರಾಮ ಮಂದಿರದಲ್ಲಿ ಅರ್ಚಕರಿಂದ ಪ್ರಾರ್ಥನೆ ನೆರವೇರಿಸಿ ಬಳಿಕ ಶ್ರೀ ರಾಮಜ್ಯೋತಿ ಬೆಳಗಿ ಆಕರ್ಷಕ ಕುಣಿತ ಭಜನೆಯೊಂದಿಗೆ ಪ್ರಮುಖ ರಸ್ತೆಯಲ್ಲಿ

ಸಾಗಿ ಬಂತು. ರಾಘವೇಂದ್ರ ಮಠದ ಬೃಂದಾವನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ. ಏನ್. ಶ್ರೀಕೃಷ್ಣ ಸೋಮಯಾಗಿ ರಾಮಜ್ಯೋತಿ ಮೆರವಣಿಗೆಗೆ ಚಾಲನೆ ನೀಡಿದರು.ರಾಮಜ್ಯೋತಿಯನ್ನು ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ಅವರ ಮೂಲಕ ಹಸ್ತಾಂತರ ಮಾಡಿದ ನಂತರ ಶ್ರೀ ರಾಮಚಂದ್ರ ಕಲ್ಪೋಕ್ತ ಪೂಜಾ ಕಾರ್ಯಕ್ರಮ ನಡೆಯಿತು.