ಪೆರುವಾಜೆ: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಸಂಪನ್ನಗೊಂಡಿದ್ದು ಈ ಹಿನ್ನೆಲೆಯಲ್ಲಿ ಮಾಸ್ತಿಕಟ್ಟೆಯಿಂದ ಜಳಕದ ಗುಂಡಿ ತನಕ ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸಿದ ಬಂಟಿಂಗ್ಸ್,ಕಂಬಗಳ ತೆರವು ಕಾರ್ಯವೂ ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ವತಿಯಿಂದ ಜ.22 ರಂದು ರಾತ್ರಿ ಕರಸೇವೆ ಮೂಲಕ ನಡೆಯಿತು.
ಕರಸೇವಕರಿಗೆ ಪ್ರಸಾದ್ ಅರ್ನಾಡಿ ಅವರು ಉಪಹಾರದ ವ್ಯವಸ್ಥೆ ಕಲ್ಪಿಸಿದರು. ಚಹಾ, ಫಲಾವು, ಹೋಳಿಗೆ ಒದಗಿಸಿದರು.