ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮ ದಿನಾಚರಣೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಮತ್ತು ಟೆಲಿಕಾಂ ಕ್ರಾಂತಿಯ ಪಿತಾಮಹ ರಾಜೀವ್ ಗಾಂಧಿ ಯವರ ಕೊಡುಗೆ ದೇಶದ ಅಭಿವೃದ್ಧಿಯಲ್ಲಿ
ಮಹತ್ತರ ಪಾತ್ರ ವಹಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ ಹೇಳಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ, ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾoಬಾರು, ಕಾಂಗ್ರೆಸ್ ಮುಖಂಡರಾದ ರಾಜೀವಿ ಆರ್ ರೈ, ನಂದರಾಜ್ ಸಂಕೇಶ, ದಿನೇಶ್ ಅಂಬೆಕಲ್ಲು, ಪವಾಜ್ ಕನಕಮಜಲು, ಸುರೇಶ ಅಮೈ, ಸುರೇಶ್ ಕಾಮತ್ ಜಯನಗರ, ರಂಜಿತ್ ರೈ ಮೇನಾಲ, ಭವಾನಿ ಶಂಕರ ಕಲ್ಮಡ್ಕ, ಜಯಪ್ರಕಾಶ್ ನೆಕ್ರಪ್ಪಾಡಿ, ಸಿದ್ದೀಕ್ ಕೊಕ್ಕೋ, ಮಂಜುನಾಥ್ ಮಡ್ತಿಲ, ಝುಬೈರ್ ಆರಂತೋಡು ಮೊದಲಾದವರು ಉಪಸ್ಥಿತರಿದ್ದರು