ಸುಳ್ಯ: ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದಲ್ಲಿ 6ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಎ.21 ಮತ್ತು 22 ರಂದು ವಿಜ್ರಂಭಣೆಯಿಂದ ನಡೆಯಲಿದೆ. ಶ್ರೀ ಗುರು ರಾಘವೇಂದ್ರ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು
ಶ್ರೀ ಗುರುರಾಯರ ಮಠದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀಹರಿ ಎಳಚಿತ್ತಾಯರ ಮಾರ್ಗದರ್ಶನದಲ್ಲಿ ನಡೆಯಲಿದೆ. ಎ.21ರಂದು ಆದಿತ್ಯವಾರ ಪೂರ್ವಾಹ್ನ 7 ರಿಂದ
ಮಹಾಗಣಪತಿ ಹೋಮ ನಡೆಯಲಿದೆ. ಸಂಜೆ 5ರಿಂದ ಪಲ್ಲಕ್ಕಿಯಲ್ಲಿ ರಾಯರ ಪಟ್ಟಣ ಸವಾರಿ ನಡೆಯಲಿದೆ. ಚೆಂಡೆ, ಡೋಲು, ವಾದ್ಯ, ಆಕರ್ಷಕ ಭಜನೆ, ಕುಣಿತ ಭಜನೆ, ಭಕ್ತ ಸಮೂಹದೊಂದಿಗೆ ರಾಯರು ಪಲ್ಲಕಿಯಲ್ಲಿ ಸುಳ್ಯ ನಗರದಲ್ಲಿ ಸಾಗಿ ಬರಲಿದ್ದಾರೆ.
ಎ.22ರಂದು ಸೋಮವಾರ ಪೂರ್ವಾಹ್ನ 9 ರಿಂದ ಪಂಚ ವಿಂಶತಿ ಕಲಶ ಪೂಜೆ, ಕಲಶಾಭಿಷೇಕ ಶ್ರೀ ರಾಘವೇಂದ್ರ ಅಷ್ಟಾಕ್ಷರಿ ಮಂತ್ರ ಹೋಮ, ಶ್ರೀ ರಾಮ ತಾರಕ ಮಂತ್ರ ಹೋಮ ನಡೆದು ಮಧ್ಯಾಹ್ನ 12 ರಿಂದ ಅಲಂಕಾರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5 ಕ್ಕೆ ಆಶ್ಲೇಷಾ ಬಲಿ ಪೂಜೆ ರಾತ್ರಿ 7 ರಿಂದ ರಂಗಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಅಂಗವಾಗಿ ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎ. 21ರಂದು ಆದಿತ್ಯವಾರ ಸಂಜೆ 4 ರಿಂದ ಭಜನೆ ನಡೆಯಲಿದೆ. ಎ.22 ರಂದು ಸೋಮವಾರ ಪೂ. 11-30ರಿಂದ ಯಜ್ಞೇಶ್ ಆಚಾರ್ ಸುಬ್ರಹ್ಮಣ್ಯ ಬಳಗ ಇವರಿಂದ ಭಕ್ತಿಗಾನ ಸಂಗೀತ ನಡೆಯಲಿದೆ.
ಸಂಜೆ ಗಂಟೆ 4 ರಿಂದ ವಿವಿಧ ಭಜನಾ ಮಂಡಳಿಗಳಿಂ ಭಜನಾ ಕಾರ್ಯಕ್ರಮ ಜರುಗಲಿದೆ. ಸಂಜೆ 5-30ರಿಂದ ಪುತ್ತೂರು ತೆಂಕಿಲದ
ಧೀಶಕ್ತಿ ಮಹಿಳಾ ಯಕ್ಷ ಬಳಗ ಇವರಿಂದ ಶ್ರೀಮತಿ ಪದ್ಮ ಕೆ. ಆರ್. ಆಚಾರ್ಯ ಇವರ ಸಾರಥ್ಯದಲ್ಲಿ ಯಕ್ಷಗಾನ ತಾಳಮದ್ದಳೆ
ಸಮರ ಸೌಗಂಧಿಕ ನಡೆಯಲಿದೆ ಎಂದು ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.