ಹೊಸದಿಲ್ಲಿ: ದಬಾಂಗ್ ಡೆಲ್ಲಿ ತಂಡವು 12ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪುಣೇರಿ ಪಲ್ಟನ್ ತಂಡವನ್ನು 31-28 ಅಂಕಗಳ ಅಂತರದಿಂದ ರೋಚಕವಾಗಿ ಮಣಿಸಿದ ಡೆಲ್ಲಿ 2ನೇ ಬಾರಿ ಪ್ರೊ ಕಬಡ್ಡಿ ಲೀಗ್ ಟ್ರೋಫಿ ಗೆದ್ದುಕೊಂಡಿದೆ. ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ
ಡೆಲ್ಲಿ ತಂಡದ ಪರ ನೀರಜ್ ನರ್ವಾಲ್ 9 ಅಂಕ ಗಳಿಸಿದರು. ಅಜಿಂಕ್ಯ ಪವರ್ 6 ಅಂಕ ಕಲೆ ಹಾಕಿದರು.
ರನ್ನರ್ ಅಪ್ಗೆ ತೃಪ್ತಿಪಟ್ಟ ಪುಣೇರಿ ತಂಡದ ಪರ ಆದಿತ್ಯ ಶಿಂದೆ 10 ಅಂಕ ಗಳಿಸಿದರು.ಡೆಲ್ಲಿಯ ಅಮೋಘ ಪ್ರದರ್ಶನಕ್ಕೆ ನೆರವಾಗಿರುವ ಇರಾನಿನ ಸುಲ್ತಾನ್ ಫಝಲ್ 12ನೇ ಆವೃತ್ತಿಯ ಪಿಕೆಎಲ್ನ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಗೆ ಪಾತ್ರರಾದರು. ಬೆಂಗಳೂರು ಬುಲ್ಸ್ ತಂಡದ ದೀಪಕ್ ಶಂಕರ್ ಪಂದ್ಯಾವಳಿಯ ಶ್ರೇಷ್ಠ ಯುವ ಆಟಗಾರ ಪ್ರಶಸ್ತಿ ಪಡೆದರು.















