ಸುಳ್ಯ:ಸುಳ್ಯ ತಾಲೂಕು ಕೃಷಿಕ ಸಮಾಜ ಪ್ರತಿನಿಧಿಗಳು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕಾ ಮೇಳಕ್ಕೆ ಅಧ್ಯಯನ ಪ್ರವಾಸ ಕೈಗೊಂಡರು. ವಿಕಸಿತ ‘ಭಾರತಕ್ಕಾಗಿ ತೋಟಗಾರಿಕೆ- ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ’ ಎಂಬ ಧ್ಯೇಯವಾಕ್ಯದೊಂದಿಗೆ ಫೆ.27ರಂದು ಆರಂಭಗೊಂಡು ಮಾ.1ರ ತನಕ 4 ದಿನಗಳ ಕಾಲ

ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕಾ ಮೇಳಕ್ಕೆ ಸುಳ್ಯ ತಾಲೂಕಿನ ಕೃಷಿಕ ಸಮಾಜ ಅಧ್ಯಕ್ಷ ಎ.ಟಿ ಕುಸುಮಾಧರ ನೇತೃತ್ವದಲ್ಲಿ ತಂಡ ಭಾಗವಹಿಸಿದ್ದಾರೆ.ಎ.ಟಿ.ಕುಸುಮಾಧರ, ಹರಿಪ್ರಕಾಶ್ ಕುರುಂಜಿ,ನಾರಾಯಣ ಆಳಂಕಲ್ಯ,ರುಕ್ಮಯ್ಯ ಸುತ್ತುಕೋಟೆ,ಅವಿನಾಶ್ ಕುರುಂಜಿ,ಉಮನಾಥ್ ಪಟೇಲ್ ಮನೆ,
ಸುಧಾಕರ ಪ್ರಭು ರವರು ಭಾಗವಹಿಸಿದ್ದರು.ವಿಕಸಿತ ಭಾರತಕ್ಕಾಗಿ ತೋಟಗಾರಿಕೆ ವಿಚಾರವಾಗಿ ನಡೆದ ಸಂವಾದ ನಡೆಯಿತು.