ಸುಳ್ಯ: ಸುಳ್ಯಕ್ಕೆ ಶುಕ್ರವಾರ ದಿನಪೂರ್ತಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು 8 ರಾತ್ರಿ ಗಂಟೆಯಾದರೂ ವಿದ್ಯುತ್ ಬಾರದೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ನಿಯತಕಾಲಿಕ ನಿರ್ವಹಣೆಯ ಹಿನ್ನಲೆಯಲ್ಲಿ 33/11 ಕೆವಿ ಲೈನ್ನಿಂದ ಹೊರಡುವ ಎಲ್ಲಾ
11 ಕೆವಿ ಫೀಡರ್ಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯ ತನಕ ವಿದ್ಯುತ್ ಕಡಿತ ಮಾಡಲಾಗಿತ್ತು. ಆದರೆ 6 ಗಂಟೆಗೆ ಬಾರದ ಕರೆಂಟ್ 8 ಗಂಟೆ ಕಳೆದರೂ ಬಂದಿಲ್ಲ. ದಿನ ಪೂರ್ತಿ ವಿದ್ಯುತ್ ಕಡಿತಗೊಂಡ ಕಾರಣ ಟ್ಯಾಂಕಿಗೆ ಕುಡಿಯುವ ನೀರು ಶೇಖರಣೆ ಕೂಡ ಮಾಡದೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಕುಡಿಯು ನೀರು ಇಲ್ಲದೆ ಜನರು ಪರದಾಡುವ ಸ್ಥಿತಿ ಉಂಟಾಗಿದೆ. ಒಟ್ಟಿನಲ್ಲಿ ಸುಳ್ಯ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕರೆಂಟ್ ಇಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಕತ್ತಲ ಭಾಗ್ಯದ ಜೊತೆಗೆ ನೀರಿಗೂ ತತ್ವಾರ ಉಂಟಾಗಿದೆ.