ಸುಳ್ಯ:ಬಾನು ಕಪ್ಪಾಗಿ ಒಂದು ಮಳೆ ಬಂದರೆ ಸುಳ್ಯದ ಕರೆಂಟ್ ಮಾಯವಾಗುತ್ತದೆ.ಹಲವು ಗಂಟೆಗಳ ಬಳಿಕ ಕರೆಂಟ್ ಬಂದರೂ ಕರೆಂಟ್ಗೆ ವೋಲ್ಟೇಜ್ ಇಲ್ಲ.. ಇದು ಸುಳ್ಯ ಜನತೆಯ ತಪ್ಪದ ದುಸ್ಥಿತಿ. ಇಂದು ಸಂಜೆ ಸುಳ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಮಳೆ ಬರುತ್ತಿದ್ದಂತೆ ಕರೆಂಟ್ ಮಾಯವಾಗಿದೆ. ಸುಮಾರು
5 ಗಂಟೆಯ ನಂತರ ಕರೆಂಟ್ ಬಂದರು ಕೆಲವು ಭಾಗಗಳಲ್ಲಿ ವೋಲ್ಟೇಜ್ ಇಲ್ಲ.ಹಳೆಗೇಟು ಮತ್ತಿತರ ಭಾಗದಲ್ಲಿ ವೋಲ್ಟೇಜ್ ಇರಲಿಲ್ಲ. ಜಯನಗರದ ಕೆಲವು ಭಾಗ, ಕುದ್ಪಾಜೆ ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್ ಸಂಪರ್ಕವೇ ಕಡಿತಗೊಂಡಿದೆ.
ಮಾತ್ರವಲ್ಲದೆ ಪದೇ ಪದೇ ವಿದ್ಯುತ್ ಕಡಿತವೂ ಆಗುತ್ತಿತ್ತು ಎಂದು ಸಾರ್ವಜನಿಕರು ಹೇಳಿದ್ದಾರೆ.5 ಗಂಟೆಯ ವೇಳೆಗೆ ಕಡಿತಗೊಂಡ ಕರೆಂಟ್ ರಾತ್ರಿ 10.30 ಆದರೂ ಸರಿಪಡಿಸಲಿಲ್ಲ. ಗ್ರಾಮೀಣ ಭಾಗದಲ್ಲಿ ಕೆಲವೆಡೆ ವಿದ್ಯುತ್ ಬರಲೇ ಇಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ. ಅಲ್ಲದೆ ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಲೋಡ್ ಶೆಡ್ಡಿಂಗ್ ಕೂಡ ಮಾಡಲಾಗುತಿದೆ. ಯಾವ ಸರಕಾರ ಆಡಳಿತ ಮಾಡಿದರೂ ವಿದ್ಯುತ್ ಬವಣೆ ತಪ್ಪುವುದಿಲ್ಲ ಎಂಬುದು ಜನರ ಅಳಲು









