ಸುಳ್ಯ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ನ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆ ಗಳ, ವಿದ್ಯಾ ಸಂಸ್ಥೆ ಗಳ ಸಹಕಾರ ದೊಂದಿಗೆ ಸ್ವಚ್ಛತಾ ಮಾಸಾಚಾರಣೆಯ ಅಂಗವಾಗಿ 3ನೇ ವಾರದ ಸ್ವಚ್ಚತಾ ಕಾರ್ಯಕ್ರಮ ಜಟ್ಟಿಪಳ್ಳದಲ್ಲಿ ನಡೆಯಿತು. ಜಟ್ಟಿಪ್ಪಳ್ಳ ಮದ್ರಸ, ಶಾಲೆ, ಕಟ್ಟೆ ಪರಿಸರ, ಅಡ್ಡ ರಸ್ತೆಗಳಲ್ಲಿ
ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಪ್ರಭಾಕರ್ ನಾಯರ್ ಶುಭ ಹಾರೈಸಿದರು. ಜಟ್ಟಿಪ್ಪಳ್ಳ ಮದ್ರಸ ಮುಖ್ಯ ಶಿಕ್ಷಕ ಲತೀಫ್ ಸಖಾಫಿ ಗೂನಡ್ಕ ದುವಾ ನೆರವೇರಿಸಿದರು. ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಕೆ. ಬಿ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಆಂದೋಲನದ ಸಂಚಾಲಕ ಯಾಕೂಬ್ ಎಸ್.ಟಿ, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ.ಮುಸ್ತಫ, ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪ್ಪಳ್ಳ, ರಾಮಚಂದ್ರ ಪೆಲ್ತಡ್ಕ, ಅನ್ಸಾರ್ ಪದಾಧಿಕಾರಿಗಳಾದ ಶಾಫಿ ಕುತ್ತಮೊಟ್ಟೆ, ಬಿ.ಯಂ ಹನೀಫ್ ಜನತಾ,ಹಾಜಿ ಅಬ್ದುಲ್ ಶಕೂರ್ ಕೆ.ಎಚ್,ಬಶೀರ್ ಸಪ್ನ,ಸಂಶುದ್ಧೀನ್. ಕೆ.ಬಿ, ನಿರ್ದೇಶಕರುಗಳಾದ ಆದಂ ಹಾಜಿ ಕಮ್ಮಾಡಿ,ಹಾಜಿ ಅಬ್ದುಲ್ಲ ಕಟ್ಟೆಕ್ಕಾರ್,ಹಾಜಿ ಅಬ್ದುಲ್ ಹಮೀದ್ ಜನತ, ಅಬ್ದುಲ್ ಗಫಾರ್ ಕೆ.ಎ,ಜುನೈದ್ ಎನ್.ಎ,ಅಬೂಬಕ್ಕರ್ ಎಸ್.ಪಿ,ಅಬ್ದುಲ್ ಲತೀಫ್ ಎಂ.ಕೆ,ಅಬ್ದುಲ್ ಮಜೀದ್ ಕೆ.ಪಿ,ಶಹೀದ್ ಪಾರೆ,ನೌಶಾದ್ ಬಾರ್ಪಣೆ,ಸಿರಾಜ್ ಫ್ಯಾನ್ಸಿ,ಗಾಂಧಿನಗರ ಜಮಾಅತ್ ಅದ್ಯಕ್ಷರಾದ ಹಾಜಿ ಮಹಮ್ಮದ್ ಕೆಯಂಎಸ್,ಕೋಶಾಧಿಕಾರಿ ಹಾಜಿ ಎಸ್.ಎಂ ಅಬ್ದುಲ್ ಹಮೀದ್,ಸಿದ್ದೀಕ್ ಕೊಡಿಯಮ್ಮೆ,ಅನ್ಸಾರಿಯ ಅದ್ಯಕ್ಷರಾದ ಹಾಜಿ ಅಬ್ದುಲ್ ಮಜೀದ್ ಜನತ, ಕಾರ್ಯದರ್ಶಿ ಅಬ್ದುಲ್ ಕಲಾಂ ಬೀಜಕೊಚ್ಚಿ, ನಿರ್ದೇಶಕರುಗಳಾದ ಅಝೀಝ್ ಬೊರುಗುಡ್ಡೆ,ಇಕ್ಬಾಲ್ ಬೊರುಗುಡ್ಡೆ, ಮೊದಲಾದವರು ಭಾಗವಹಿಸಿದ್ದರು














