ಮಂಡ್ಯ:ಗುರುದೇವ ಅಕಾಡೆಮಿ ಆಫ್ ಫೈನ್ಆರ್ಟ್ಸ್ ವತಿಯಿಂದ ಗುರುದೇವೋತ್ಸವ ಅ. 3 ಮತ್ತು 4ರಂದು ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ಇದರ ಅಂಗವಾಗಿ ಗುರುದೇವ ವರ್ಣೋತ್ಸವ ಮತ್ತು ಗುರುದೇವ ಪಲ್ಲವ-ಗುರುದೇವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು
ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ನ ನಿರ್ದೇಶಕಿ ಡಾ. ಚೇತನಾ ರಾಧಾಕೃಷ್ಣ ಪಿ.ಎಂ. ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಕಾಡೆಮಿಯಲ್ಲಿ ಪ್ರಸ್ತುತ ನೃತ್ಯ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಅವರವರ ಹಂತಕ್ಕೆ ತಕ್ಕಂತೆ ತರಬೇತಿ ನೀಡಿ ಅವಕಾಶ ಕಲ್ಪಿಸಲಾಗುವುದು. ಅನೇಕ ಹಳೆಯ ವಿದ್ಯಾರ್ಥಿಗಳು ತಮ್ಮದೇ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಎಲ್ಲರೂ ಒಂದೇ ಕುಟುಂಬದಂತೆ ಒಟ್ಟಾಗಿ ಭಾಗವಹಿಸಲಿದ್ದಾರೆ ಎಂದರು.
ಅ. 3ರಂದು ಶನಿವಾರ ಸಂಜೆ ಗಂಟೆ 4ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಎನ್. ಚಲುವರಾಯಸ್ವಾಮಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಪಿ. ರವಿಕುಮಾರ್ ಗೌಡ ಅವರು ವಹಿಸಲಿದ್ದಾರೆ. ಮಂಡ್ಯದ ಚಿನ್ಮಯ ಮಿಷನ್ನ ಶ್ರೀ ಸ್ವಾಮಿ ಆದಿತ್ಯಾನಂದಜೀ ಆಚಾರ್ಯ ಆಶೀರ್ವಚನ ನೀಡುವರು.ಗುರುದೇವ ಪ್ರಶಸ್ತಿಯನ್ನು ಹಿರಿಯ ಮಾಧ್ಯಮ ಛಾಯಾಗ್ರಾಹಕ ಕೆ.ವೇಣುಗೋಪಾಲ್ ಅವರಿಗೆ ನೀಡಿ ಪುರಸ್ಕರಿಸಲಾಗುವುದು. ಉದ್ಘಾಟನಾ ಸಮಾರಂಭದಲ್ಲಿ ಅಕಾಡೆಮಿಯ ಕಲಾತ್ಮಕ ನಿರ್ದೇಶಕಿ ಡಾ.ಚೇತನಾ ರಾಧಾಕೃಷ್ಣ ಪಿ.ಎಂ ಭಾಗವಹಿಸುವರು.ಸಾಂಸ್ಕೃತಿಕ ಕಾರ್ಯಕ್ರಮವಾಗಿ ಗುರುದೇವ ಅಕಾಡೆಮಿಯ ಹಿರಿಯ ಕಿರಿಯ ಕಲಾವಿದರಿಂದ ಗುರುದೇವ ವರ್ಣೋತ್ಸವ ಹಾಗೂ ವಿವಿಧ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ನಡೆಯಲಿದೆ.
ಅ. 4 ರ ಭಾನುವಾರ ಸಂಜೆ ಗಂಟೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ
ಬಿ.ಜಯಪ್ರಕಾಶ ಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷಿ ಸಚಿವ ಪಿ..ಎಂ. ನರೇಂದ್ರ ಸ್ವಾಮಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಬಿ. ಶಂಕರಗೌಡ, ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ. ಎನ್. ನಂದೀಶ್, ಭಾಗವಹಿಸಲಿದ್ದಾರೆ.ಗಾಯಕ ಪ್ರತಿಭಾಂಜಲಿ ಡೇವಿಡ್ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುದೇವ ಅಕಾಡೆಮಿಯ ಕಲಾವಿದರಿಂದ ಗುರುದೇವ ಪಲ್ಲವ ಅನ್ನುವ ಶಾಸ್ತ್ರೀಯ ಕಾರ್ಯಕ್ರಮ,ಡಾ. ಚೇತನಾ ರಾಧಾಕೃಷ್ಣ ಅವರ ಪರಿಕಲ್ಪನೆ ಮತ್ತು ನೃತ್ಯ ಸಂಯೋಜನೆಯೊಂದಿಗೆ ಸಮೂಹ ಭರತನಾಟ್ಯ ಹಾಗೂ ಇನ್ನಿತರ ಶಾಸ್ತ್ರೀಯ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಸುಳ್ಯ ಕನಕ ಮಜಲಿನ ಕನಕ ಕಲಾ ಗ್ರಾಮದಲ್ಲಿ ಅಭ್ಯಾಸ ಮಾಡುತ್ತಿರುವ ನೃತ್ಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಅ.3 ರಂದು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ಪಿ. ಎಂ. ಹಾಗೂ ಎಂ.ಎಲ್. ರಾಜನ್ ಇದ್ದರು.









