ಮೌಂಟ್ ಮಂಗನೂಯಿ: ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡವು 22 ರನ್ಗಳ ರೋಚಕ ಗೆಲುವು ಸಾಧಿಸಿದೆ.ಈ ಗೆಲುವಿನೊಂದಿಗೆ ಭಾರತ ತಂಡವು ಏಕದಿನ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿತು.ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ
ಭಾರತ ತಂಡವು 42.1 ಓವರ್ಗಳಲ್ಲಿ 209 ರನ್ಗೆ ಆಲೌಟ್ ಆಯಿತು.210 ರನ್ಗಳ ಗುರಿ ಬೆನ್ನಟ್ಟಿದ ಕಿವೀಸ್ 48.1 ಓವರ್ಗಳಲ್ಲಿ 187 ರನ್ ಗಳಿಸಿ ಸೋಲೊಪ್ಪಿಕೊಂಡಿತು.ವಿಲ್ ಯಂಗ್(22 ರನ್), ಟಿಮ್ ಸೈಫರ್ಟ್(14 ರನ್), ನಿಕ್ ಕೆಲ್ಲಿ(24 ರನ್), ಫಿನ್ ಅಲೆನ್(1 ರನ್) ಸೇರಿದಂತೆ ಯಾವುದೇ ಬ್ಯಾಟರ್ಗಳು ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಡೀನ್ ಫಾಕ್ಸ್ಕ್ರಾಫ್ಟ್ 31 ರನ್ ಗಳಿಸಿದ್ದು, ನ್ಯೂಜಿಲೆಂಡ್ ಪರ ಗರಿಷ್ಠ ಮೊತ್ತವಾಗಿದೆ.ಭಾರತದ ಪರ ಅರ್ಷದೀಪ್ ಸಿಂಗ್ 3 ವಿಕೆಟ್, ಸಿರಾಜ್ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಉರುಳಿಸಿದರು.ಮೊದಲು ಬ್ಯಾಟ್ ಮಾಡಿದ ಭಾರತವೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರಂಭಿಕರಾದ ರೋಹಿತ್ ಶರ್ಮಾ (7), ಋತುರಾಜ್ ಗಾಯಕವಾಡ್ (18) ಹಾಗೂ ವಿರಾಟ್ ಕೊಹ್ಲಿ (5) ತಂಡದ ಮೊತ್ತ 34 ರನ್ ಆಗುವಷ್ಟರಲ್ಲೇ ಪೆವಿಲಿಯನ್ ಸೇರಿಕೊಂಡರು.ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಇದೇ ಮೊದಲ
ಬಾರಿಗೆ ಏಕದಿನ ತಂಡ ಮುನ್ನಡೆಸುತ್ತಿರುವ ಶ್ರೇಯಸ್ ಅಯ್ಯರ್ (22) ಮತ್ತೊಮ್ಮೆ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ತಲಾ 46 ರನ್ ಗಳಿಸಿದ ಇಶಾನ್ ಕಿಶನ್, ಅಕ್ಷರ್ ಪಟೇಲ್ ಮತ್ತು ನಮನ್ ಧೀರ್ (22) ಕಾಣಿಕೆ ನೀಡಿದರು. ಮೊಹಮ್ಮದ್ ಸಿರಾಜ್(ಅಜೇಯ 14 ರನ್), ಅರ್ಷದೀಪ್ ಸಿಂಗ್(14 ರನ್) ಗಳಿಸಿದರು.ನ್ಯೂಜಿಲೆಂಡ್ ಪರ ಜೇಕಬ್ ಡಫಿ ಹಾಗೂ ನಾಯಕ ಮಿಚೆಲ್ ಸ್ಯಾಂಟನರ್ ತಲಾ ಮೂರು ವಿಕೆಟ್ ಉರುಳಿಸಿದರು. ಮ್ಯಾಟ್ ಫಿಷರ್ ಎರಡು ವಿಕೆಟ್ ಕಿತ್ತರೆ, ಬ್ಲೇರ್ ಥಿಕ್ನರ್, ಮೈಕೆಲ್ ಬ್ರೇಸ್ವೆಲ್ ಒಂದೊಂದು ವಿಕೆಟ್ ಹಂಚಿಕೊಂಡರು.














