ಸುಳ್ಯ: ಸುಳ್ಯ ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿದಿದ್ದು ಬೀಸಿದ ಭಾರೀ ಗಾಳಿ ಮತ್ತು ಮಳೆಗೆ ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಕಂಬಗಳಿಗೆ, ಲೈನ್ಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ. ಆದುದರಿಂದ ವಿವಿಧ ಕಡೆಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಎಂದು ಮೆಸ್ಕಾಂ ಮಾಹಿತಿ ನೀಡಿದೆ. 33 ಕೆ.ವಿ.ಲೈನ್ನಲ್ಲಿ ಸಮಸ್ಯೆ ಇಲ್ಲ. ಆದರೆ ಗ್ರಾಮೀಣ ಭಾಗಗಳಲ್ಲಿ ವಿವಿಧ ಕಡೆಗಳಲ್ಲಿ
ವಿದ್ಯುತ್ ಕಂಬ,,ಲೈನ್ಗಳಿಗೆ ಹಾನಿ ಉಂಟಾಗಿದೆ. 15 ಹೆಚ್.ಟಿ ಲೈನ್ ಕಂಬ, 17 ಎಲ್ಟಿ ಕಂಬಗಳಿಗೆ ಹಾಗೂ ಲೈನ್ಗಳಿಗೆ ಹಾನಿ ಉಂಟಾಗಿದೆ. ಜಾಲ್ಸೂರು, ಮಂಡೆಕೋಲು, ಆಲೆಟ್ಟಿ, ಉಬರಡ್ಕ ಸೇರಿದಂತೆ ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು
ಮೆಸ್ಕಾಂ ಇಂಜಿನಿಯರ್ಗಳು ಮಾಹಿತಿ ನೀಡಿದ್ದಾರೆ. ಸುಳ್ಯ ನಗರದಲ್ಲಿ ಸಮಸ್ಯೆ ಎದುರಾಗಿಲ್ಲ ಆದರೆ ನಗರ ಮತ್ತು ಗ್ರಾಮೀಣ ಲೈನ್ ಒಂದೇ
ಲೈನ್ ಇರುವ ಕಡೆಗಳಲ್ಲಿ ಜಂಪರ್ ಬದಲಾವಣೆಯಾಗುವ ತನಕ ನಗರದಲ್ಲಿ ಕೆಲವೆಡೆ ವಿದ್ಯುತ್ ಕಡಿತ ಉಂಟಾಗಲಿದೆ. ಜಂಪರ್ ಬದಲಾವಣೆ ಮಾಡಿ ನಗರದಲ್ಲಿ ಚಾರ್ಜ್ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ವಿವಿಧೆಡೆ ವಿದ್ಯುತ್ ಸರಬರಾಜು ತಡವಾಗಲಿದೆ ಎಂದು ಇಂಜಿನಿಯರ್ಗಳು ತಿಳಿಸಿದ್ದಾರೆ. ಕಂಬಗಳು, ಲೈನ್ಗೆ ಹಾನಿ ಸಂಭವಿಸದ ಲೈನ್ಗಳಲ್ಲಿ ವಿದ್ಯುತ್ ಸರಬರಾಜು ಸಾಧ್ಯವಾಗಬಹುದು ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ.