ಸುಳ್ಯ:ಗಾಳಿ ಮಳೆ ಸುರಿಯುತ್ತಿದ್ದಂತೆ ಸುಳ್ಯಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.ಏ.27ರಂದು ಸಂಜೆ ಸುರಿದ ಭಾರೀ ಮಳೆ ಹಾಗೂ ಬೀಸಿದ ಭಾರೀ ಗಾಳಿ ಮಳೆಗೆ ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಕಂಬಗಳಿಗೆ, ಲೈನ್ಗಳಿಗೆ ವ್ಯಾಪಕ ಹಾನಿ ಸಂಭವಿಸಿದ್ದು. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. 33 ಕೆವಿ ಲೈನ್ನಲ್ಲಿ
ಅಂಚಿನಡ್ಕ , ಕೌಡಿಚಾರಿನಲ್ಲಿ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಆದುದರಿಂದ 33 ಕೆ.ವಿ. ಲೈನ್ ಸಂಪರ್ಕ 9.30ರ ಬಳಿಕ ಪುನಃ ಸ್ಥಾಪನೆಯಾಗಬಹುದು ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ಅಲ್ಲದೆ ಸುಳ್ಯ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ

ಮರ ಬಿದ್ದು, ಕಂಬ ಮುರಿದು ವಿದ್ಯುತ್ ಸಂಪರ್ಕ ಜಾಲ ಅಸ್ತವ್ಯಸ್ತಗೊಂಡಿದೆ.ಆದುದರಿಂದ ವಿವಿಧ ಕಡೆಗಳಲ್ಲಿ ವಿದ್ಯುತ್ ಸರಬರಾಜು ತಡವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ. 9.30 ರ ಬಳಿಕ 33 ಕೆವಿ ಲೈನ್ ಚಾರ್ಜ್ ಆಗಲಿದೆ. ಆದರೆ 11 ಕೆವಿ ಲೈನಗಳಲ್ಲಿ ಅಲ್ಲಲ್ಲಿ ಮರ ಬಿದ್ದು , ಗಾಳಿಗೆ ಕಂಬ ತುಂಡಾಗಿ ಹಾನಿ ಸಂಭವಿಸಿದೆ. ಇದರಿಂದ ವಿವಿಧ ಕಡೆಗಳಲ್ಲಿ
ವಿದ್ಯುತ್ ಸರಬರಾಜು ತಡವಾಗಲಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ.
