ಸುಳ್ಯ: ಸುಳ್ಯದಲ್ಲಿ ಎ.27ರಂದು ಗುಡುಗು ಸಹೀತ ಭಾರೀ ಮಳೆಯಾಗಿದೆ. ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆ ಸುರಿದಿದೆ.
ಸುಳ್ಯ ನಗರದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಭರ್ಜರಿ ಮಳೆಯಾಗಿದ್ದು 70 ಮಿ.ಮಿ. ಮಳೆ ಸುರಿದಿದೆ ಎಂದು ಸುಳ್ಯ ನಗರದಲ್ಲಿ
ಮಳೆ ಲೆಕ್ಕಾಚಾರ ಮಾಡುವ ಶ್ರೀಧರ ರಾವ್ ತಿಳಿಸಿದ್ದಾರೆ.ಕಂಜರ್ಪಣೆ, ಬೆಳ್ಳಾರೆ, ಗುತ್ತಿಗಾರು, ಕೊಲ್ಲಮೊಗ್ರ, ಏನೆಕಲ್ಲು, ಕರಿಕಳ, ಕಲ್ಮಡ್ಕ, ಎಣ್ಮೂರು ಸೇರಿದಂತೆ ಸುಳ್ಯ, ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇದ್ದು ಸಂಜೆ 3.30 ರ ಬಳಿಕ ಮಳೆ ಸುರಿದಿದೆ. ಗುಡುಗು ಸಿಡಿಲಿನ ಅಬ್ಬರದೊಂದಿಗೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿದಿದೆ. ಗಾಳಿಯ ಅಬ್ಬರವೂ ಜೋರಾಗಿತ್ತು.