ಪೇರಡ್ಕ: ಪೇರಡ್ಕ ಮುಹಿಯುದ್ದಿನ್ ಜುಮಾ ಮಸ್ಜಿದಲ್ಲಿ ಬಕ್ರೀದ್ ಆಚರಿಸಲಾಯುತು. ಹಬ್ಬದ ಮಹತ್ವದ ಬಗ್ಗೆ ಖತೀಬ್ ನಹೀಮ್ ಫೈಜಿ ಸಂದೇಶ ನೀಡಿ ಪ್ರಾರ್ಥನೆ ನಡೆಸಿದರು. ಎಲ್ಲರು ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿ ಖಬರಸ್ಥಾನದಲ್ಲಿ ಮತ್ತು
ಪೇರಡ್ಕ ಗೂನಡ್ಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು ಮುಹಿಯುದ್ದಿನ್ ಜುಮಾ ಮಸ್ಜಿದ್ ಪೇರಡ್ಕ ಗೂನಡ್ಕ ಇದರ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ, ಟಿ ಬಿ ಹನೀಫ್ ತೆಕ್ಕಿಲ್, ಪಿ ಕೆ ಉಮ್ಮರ್ ಗೂನಡ್ಕ, ಮೊಹಮ್ಮದ್ ಕುಂಞಿ ತೆಕ್ಕಿಲ್ ಪೇರಡ್ಕ , ಸಹಿತ ಜಮಾತಿನ ಊರಿನ ಪ್ರಮುಖರು ಭಾಗವಹಿಸಿದರು.