ಬೆಂಗಳೂರು: ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್ ಜಯ ದಾಖಲಿಸಿತು.ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು.ಆರ್ಸಿಬಿ 14 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ ಪೇರಿಸಿತು. ಟೀಂ ಡೇವಿಡ್ 50 ರನ್ ಹೊಡೆದರು.ಗುರಿ ಬೆನ್ನತ್ತಿದ ಪಂಜಾಬ್ 12.1 ಓವರ್ನಲ್ಲಿ
5 ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು. ನೆಹಲ್ ವದೇರ 33 ರನ್ ಹೊಡೆದು ಗೆಲುವಿಗೆ ಕಾರಣರಾದರು.ಮಳೆಯ ಕಾರಣ ಪಂದ್ಯವನ್ನು 14 ಓವರ್ಗಳಿಗೆ ಇಳಿಸಲಾಗಿತ್ತು. ಮಳೆಯಿಂದಾಗಿ ಸುಮಾರು 2 ಗಂಟೆ 15 ನಿಮಿಷ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ
ಆರ್ಸಿಬಿ ಪಾಲಿಗೆ ಟಿಮ್ ಡೇವಿಡ್ ಅವರ ಆಕರ್ಷಕ ಅರ್ಧಶತಕ (50; 26ಎ, 4X5, 6X3) ಮಾತ್ರ ಅಸರೆಯಾಯಿತು. ಪಂಜಾಬ್ ಬೌಲರ್ಗಳ ದಾಳಿ ಮತ್ತು ಫೀಲ್ಡರ್ಗಳ ಚುರುಕಾದ ಆಟದ ಮುಂದೆ ಆರ್ಸಿಬಿಯು ನಿಗದಿತ ಓವರ್ಗಳಲ್ಲಿ ವಿಕೆಟ್ಗಳಿಗೆ 95 ರನ್ ಪೇರಿಸಿತು.ಗುರಿ ಬೆನ್ನಟ್ಟಿದ ಪಂಜಾಬ್ ತಂಡವು 12.1 ಓವರ್ಗಳಲ್ಲಿ 5 ವಿಕೆಟ್ಗಳಿಗೆ 98 ರನ್ ಗಳಿಸಿತು. ಎಡಗೈ ವೇಗಿ ಅರ್ಷದೀಪ್ ಸಿಂಗ್ ತಮ್ಮ ಸ್ಪೆಲ್ನಲ್ಲಿಯೇ ಅವರು ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ವಿಕೆಟ್ಗಳನ್ನು ಕಬಳಿಸಿದರು.ಡೇವಿಡ್, ನಾಯಕ ರಜತ್ ಪಾಟೀದಾರ್ (23; 18ಎ) ಬಿಟ್ಟರೆ ಉಳಿದ ಬ್ಯಾಟರ್ಗಳು ಹೆಚ್ಚು ಪ್ರತಿರೋಧ ತೋರಲಿಲ್ಲ. 9 ಬ್ಯಾಟರ್ಗಳು ಎರಡಂಕಿ ಮುಟ್ಟಲೇ ಇಲ್ಲ.
ಆರ್ಸಿಬಿ 6.1 ಓವರ್ಗಳಲ್ಲಿ 33 ರನ್ಗಳಿಗೆ 5 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಕ್ರೀಸ್ಗೆ ಬಂದ ಟಿಮ್ ಡೇವಿಡ್ ಇನಿಂಗ್ಸ್ಗೆ ಜೀವ ತುಂಬಿದರು. ಅವರ ಆಟದಿಂದಾಗಿ ಕೊನೆಯ ಐದು ಓವರ್ಗಳಲ್ಲಿ 52 ರನ್ಗಳು ಹರಿದುಬಂದವು. ಅದರಲ್ಲೂ ಸ್ಪಿನ್ನರ್ ಹರಪ್ರೀತ್ ಬ್ರಾರ್ ಹಾಕಿದ ಕೊನೆಯ ಓವರ್ನಲ್ಲಿ ‘ಸಿಕ್ಸರ್ ಹ್ಯಾಟ್ರಿಕ್’ ಸಾಧಿಸಿದರು. ಇದೊಂದೇ ಓವರ್ನಲ್ಲಿ ಒಟ್ಟು 21 ರನ್ಗಳು ಸೇರಿದವು.
ಡೇವಿಡ್ ಅವರು ಮುರಿಯದ 10ನೇ ವಿಕೆಟ್ ಜೊತೆಯಾಟದಲ್ಲಿ ಜೋಷ್ ಹ್ಯಾಜಲ್ವುಡ್ ಅವರೊಂದಿಗೆ 32 ರನ್ ಸೇರಿಸಿದರು.
ಗುರಿ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಆತಿಥೇಯ ಬಳಗದ ವೇಗಿ ಹ್ಯಾಜಲ್ವುಡ್ (14ಕ್ಕೆ3) ಮತ್ತು ಭುವನೇಶ್ವರ್ ಕುಮಾರ್ (26ಕ್ಕೆ2) ಸವಾಲೊಡ್ಡಿದರು. ಇನಿಂಗ್ಸ್ ಆರಂಭದಲ್ಲಿ ಭುವಿ ಪೆಟ್ಟುಕೊಟ್ಟರು. ಅದರಿಂದಾಗಿ ಪಂಜಾಬ್ 32ಕ್ಕೆ 2 ವಿಕೆಟ್ ಕಳೆದುಕೊಂಡಿತು. ಎಂಟನೇ ಓವರ್ ಹಾಕಿದ ಜೋಶ್ ಅವರು ಶ್ರೇಯಸ್ ಅಯ್ಯರ್ ಮತ್ತು ಇಂಗ್ಲಿಸ್ ಅವರ ವಿಕೆಟ್ ಗಳಿಸಿದರು. ಇದರಿಂದಾಗಿ ಆರ್ಸಿಬಿಗೆ ಜಯದ ಆಸೆ ಚಿಗುರಿತ್ತು. ಆದರೆ, ನೆಹಲ್ ವಧೇರಾ (33; 19ಎ) ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಿದರು.