ನವದೆಹಲಿ:ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ದೆಹಲಿಯಲ್ಲಿಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ರಾಜ್ಯ ಮುಖ್ಯಮಂತ್ರಿಯಾದ ಬಳಿಕದ ಮೊದಲ ಪ್ರಧಾನಿ ಭೇಟಿ ಇದಾಗಿದೆ.ಕೇರಳದ ಅಭಿವೃದ್ಧಿ ಯೋಜನೆಗಳ
ವಿಚಾರದಲ್ಲಿ ಪ್ರಧಾನಿ ಜತೆ ಮಾತುಕತೆ ನಡೆಸಿದರು ಎನ್ನಲಾಗಿದೆ. ಇಂದು ಬೆಳಿಗ್ಗೆ 11.30 ಕ್ಕೆದೆಹಲಿಯ ಪ್ರಧಾನಮಂತ್ರಿ ಕಚೇರಿ ಸೇವಾ ತೀರ್ಥದಲ್ಲಿ ಮಾತುಕತೆ ನಡೆಯಿತು. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರಕಾರದ ಸಹಕಾರ ಸೇರಿ ವಿವಿಧ ವಿಷಯಗಳ ಕುರಿತು ಸುಮಾರು 40 ನಿಮಿಷಗಳ ಕಾಲ ಪ್ರಧಾನಿ ಜತೆ ಮಾತುಕತೆ ನಡೆಯಿತು.ಪ್ರಧಾನಿಯವರ ಜತೆಗಿನ ಮಾತುಕತೆಯ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಹಾಗೂ ಇತರ ಕೇಂದ್ರ ಅಚಿವರ ಜೊತೆ ಕೂಡಾ ಮುಖ್ಯಮಂತ್ರಿ ಸಮಾಲೋಚನೆ ನಡೆಸಲಿದ್ದಾರೆ.














