ಸುಳ್ಯ:ಮಹಿಳೆಯರ ಸಮನ್ವಯ ವಿಧ್ಯಭ್ಯಾಸ ಉನ್ನತಿಗಾಗಿ ಎಸ್ಕೆಎಸ್ಎಸ್ಎಫ್ ಅಡ್ಕ ಇರುವಂಬಳ್ಳ ಶಾಖೆ ಆರಂಭಿಸಿದ ಅಜ್ಜಾವರ ಅಡ್ಕದ ಝೈನ್ ಎಕ್ಸಲೆನ್ಸ್ ಪಾರ್ ಮೋರಲ್ ಎಜ್ಯುಕೇಶನ್ ವಿದ್ಯಾಸಂಸ್ಥೆಯ 8ನೇ ವಾರ್ಷಿಕೋತ್ಸವ ಹಾಗೂ 2ನೇ ಸನದುದಾನ ಸಮ್ಮೇಳನ ಎ. 25 ಶುಕ್ರವಾರ ಸಂಜೆ 8ರಿಂದ ನಡೆಯಲಿದೆ ಎಂದು ಸನದುದಾನ ಸಮೇಳನದ ಝೈನಿಯಾ ಸ್ವಾಗತ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಝೈನಿಯಾ ಸ್ವಾಗತ ಸಮಿತಿಯ
ವರ್ಕಿಂಗ್ ಕಾರ್ಯದರ್ಶಿ ಮಹಮ್ಮದ್ ಶಾಫಿ ದಾರಿಮಿ ಅಜ್ಜಾವರ ’25ರಂದು ಸಂಜೆ 4.30ಕ್ಕೆ ಧ್ವಜಾರೋಹಣ, ಬಳಿಕ ಸರ್ವ ಧರ್ಮ ಸಮ್ಮೇಳನ ನಡೆಯಲಿದೆ. ಸಂಜೆ 7 ರಿಂದ ಮಜ್ಲಿಸುನ್ನೂರ್ ಆತ್ಮೀಯ ಸಂಗಮ ಝೈನಿಯಾ ಚೆಯರ್ಮೆನ್ ಸಯ್ಯಿದ್ ಅಕ್ರಂ ಅಲೀ ತಂಙಳ್ ಅವರ ನೇತೃತ್ವದಲ್ಲಿ ನಡೆಯಲಿದೆ. ರಾತ್ರಿ 8 ರಿಂದ ಸನದುದಾನ ಸಮ್ಮೇಳನ ನಡೆಯಲಿದೆ. ದುವಾಃ ನೇತೃತ್ವವನ್ನು ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ ವಹಿಸಲಿದ್ದಾರೆ.
ಸನದುದುದಾನ ಸಮ್ಮೇಳನವನ್ನು ಸಮಸ್ತ ಕೇರಳ ಜಮೀಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಿ ಮಾತನಾಡಲಿದ್ದಾರೆ.
ಸನದುದಾನ ಪ್ರಭಾಷಣವನ್ನು ದ ಕ ಜಿಲ್ಲಾ ದಾರುನ್ನೂರ್ ಕೇಂದ್ರ ಸಮಿತಿ ಅಧ್ಯಕ್ಷರಾದ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹಾರಿ ನೆರವೇರಿಸಲಿದ್ದಾರೆ.ನಂತರ ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ ನೌಶಾದ್ ಬಾಖವಿ ತಿರುವನಂತಪುರಂ ಅವರ ಪ್ರಭಾಷಣ ನಡೆಯಲಿದೆ. ಝೈನಿಯಾ ಸ್ವಾಗತ ಸಮಿತಿ ಚೆಯರ್ಮೆನ್ ಕತ್ತರ್ ಇಬ್ರಾಹಿಂ ಹಾಜಿ ಮಂಡೆಕೋಲು ಅಧ್ಯಕ್ಷತೆ ವಹಿಸುವರು.

ಕಾರ್ಯಕ್ರಮದಲ್ಲಿ ಸಯ್ಯಿದ್ ಹಕೀಂ ತಂಙಳ್ ಆದೂರು, ಅಬ್ದುಲ್ ಮಜೀದ್ ದಾರಿಮಿ ಪೈವಳಿಕೆ, ಇರ್ಷಾದ್ ದಾರಿಮಿ ಮಿತ್ತಬೈಲ್, ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಉಸ್ತಾದ್ ಶರೀಫ್ ಪೈಝಿ ಕಡಬ , ನಸೀಹ್ ದಾರಿಮಿ, ಅಬ್ದುಲ್ಲಾ ನಿಝಾಮಿ ಸೇರಿದಂತೆ ಸುಳ್ಯ ತಾಲೂಕಿನ ಜಮಾಹತಿನ ಖತೀಬ್ ಉಸ್ತಾದರು ಗಣ್ಯ ಉಪಸ್ಥಿತರಿದ್ದಾರೆ.ಅಲ್ಲದೇ ಶರೀಫ್ ಹಾಜಿ ವೈಟ್ ಸ್ಟೋನ್, ಸಿ ಎಂ ಅಬ್ದುಲ್ ಖಾದರ್ ಹಾಜಿ ಚೆರ್ಕಲ, ಅಬ್ದುಲ್ ರಹಿಮಾನ್ ಸಂಕೇಶ್ , ಲತೀಫ್ ಹರ್ಲಡ್ಕ, ಓಮೆಗಾ ಮುಹಮ್ಮದ್, ಅಬ್ದುಲ್ ಲತೀಫ್ ಹಾಜಿ ಬೆಂಗಳೂರು, ಉಮ್ಮರ್ ಹಾಜಿ ಬೆಂಗಳೂರು, ಬಶೀರ್ ಹಾಜಿ ಕೊಡಗು, ಹಂಝ ಎಡಪಾಳಂ,ಇಕ್ಬಾಲ್ ಕೋಲ್ಪೆ, ಡಾ ನಝೀರ್ ಕಾವು, ಇಬ್ರಾಹಿಂ ಹಾಜಿ ಪುಸ್ಪಕ್, ಹಿರಾ ಕಾದರ್ ಹಾಜಿ, ಎನ್ ಎಸ್ ಅಬ್ದುಲ್ಲ ಹಾಜಿ, ಕೆ ಎಚ್ ಮುಹಮ್ಮದ್ ಈಶ್ವರಮಂಗಳ, ಇಬ್ರಾಹಿಂ ಹಾಜಿ ಸಿ ಪುಡ್,ಮಜೀದ್ ಜನತಾ, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಅಬೂಬಕ್ಕರ್ ಮಂಗಳ, ಟಿ ಎಂ ಶಹೀದ್ ತೆಕ್ಕಿಲ್ , ಹಮೀದ್ ಕುತ್ತಮೊಟ್ಟೆ , ಮುಸ್ತಾಪಾ ಜನತಾ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಯುಕ್ತ ಸಂಜೆ 4.30 ಕ್ಕೆ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಇಸಾಕ್ ಹಾಜಿ ಪಾಜಪಳ್ಳ ದ್ವಜಾರೋಹಣ ನಡೆಸಲಿದ್ದಾರೆ. ಮತ್ತು ಝೈನಿಯಾ ಪ್ರಿನ್ಸಿಪಾಲ್ ಅಬ್ದುಲ್ಲಾ ನಿಝಾಮಿ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಮಾರಂಭ ನಡೆಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಝೈನಿಯಾ ರಕ್ಷಾಧಿಕಾರಿ ಸಯ್ಯಿದ್ ಹಕೀಂ ತಂಙಳ್ ಅದೂರು , ಸ್ವಾಗತ ಸಮಿತಿ ಚೆಯರ್ಮೆನ್ ಕತ್ತರ್ ಇಬ್ರಾಹಿಂ ಹಾಜಿ ಮಂಡೆಕೋಲು , ಝೈನಿಯಾ ಪ್ರ ಕಾರ್ಯದರ್ಶಿ ಮೊಹಿಯ್ಯದ್ದೀನ್ ಅನ್ಸಾರಿ, ಸ್ವಾಗತ ಸಮಿತಿ ಕನ್ವೀನರ್ ಸಿದ್ದೀಕ್ ಅಡ್ಕ ಉಪಸ್ಥಿತರಿದ್ದರು.







