ಕಾಸರಗೋಡು: ಕಾಸರಗೋಡು ಜಿಲ್ಲೆಯ ನೀಲೇಶ್ವರದ ಅಞೂಟ್ಟಂಬಲಂ ವೀರರ್ಕಾವು ಕ್ಷೇತ್ರದ ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ಬೆಡಿಗಾಗಿ ತಂದಿರಿಸಿದ ಪಟಾಕಿ ಅವಘಡ ಸಂಭವಿಸಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ತಡರಾತ್ರಿ ಸಂಭವಿಸಿದೆ. ಪಟಾಕಿ ಶೇಖರಿಸಿಟ್ಟಿದ್ದ
ಕಟ್ಟಡಕ್ಕೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. 154 ಮಂದಿ ಗಾಯಗೊಂಡಿದ್ದು 8 ಮಂದಿಗೆ ಗಂಭೀರ ಗಾಯಗಳಾಗಿದೆ. ಗಾಯಗೊಂಡವರನ್ನು ಕಾಞಂಗಾಡ್, ಕಣ್ಣೂರು, ಕೋಝಿಕೋಡ್, ಪರಿಯಾರಂ, ಮಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.
ವೀರರ್ಕಾವು ಕ್ಷೇತ್ರದಲ್ಲಿ ತೆಯ್ಯಂಕೆಟ್ ಉತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಧ್ಯರಾತ್ರಿಯ ವೇಳೆಗೆ ಅವಘಡ ಸಂಭವಿಸಿದೆ. ಭಾರೀ ಶಬ್ದದೊಂದಿಗೆ ಅವಘಡ ಸಂಭವಿಸಿದ್ದು ದೂರದವರೆಗೂ ಭಾರೀ ಕಂಪನ ಉಂಟಾಗಿದೆ.