ಸುಳ್ಯ:ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ ಇದರ ಸಹಭಾಗಿತ್ವದಲ್ಲಿ ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯರ ಆಶ್ರಯದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮಟ್ಟದ ಗುಡ್ಡಗಾಡು ಓಟ ಸುಳ್ಯದಲ್ಲಿ ಅ.29ರಂದು

ನಢಯಿತು. ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ದ್ವಿತೀಯ ಬಿ.ಎ.ಎಂ.ಎಸ್ ವಿದ್ಯಾರ್ಥಿನಿ ವೈಷ್ಣವಿ ಬಟಕುರ್ಕಿ ವಿಶ್ವವಿದ್ಯಾಲಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ .
ಗುಡ್ಡಗಾಡು ಓಟದಲ್ಲಿ ಕಾಲೇಜಿನ ವೈಷ್ಣವಿ ಬಟಕುರ್ಕಿ, ರಾಧಾ ಪವರ್, ಬಸವರಾಜ್, ಗದಗಯ್ಯ ಈರಣ್ಣ, ಶ್ರೀನಿವಾಸ್ ಭಾಗವಹಿಸಿದ್ದರು. ವಿದ್ಯಾರ್ಥಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷ ಡಾ. ಚಿದಾನಂದ ಕೆ ವಿ,ಪ್ರಧಾನ ಕಾರ್ಯದರ್ಶ ಅಕ್ಷಯ್ ಕೆ ಸಿ, ಉಪಾಧ್ಯಕ್ಷೆ

ಶೋಭಾ ಚಿದಾನಂದ, ಕಾರ್ಯದರ್ಶಿ ಡಾ. ಐಶ್ವರ್ಯ ಕೆ ಸಿ ಜೊತೆ ಕಾರ್ಯದರ್ಶಿ ಹೇಮನಾಥ್ ಕೆ.ವಿ, ಕೋಶಾಧಿಕಾರಿಗಳಾದ ಡಾ. ಗೌತಮ್ ಗೌಡ
ಕೌನ್ಸಿಲ್ ಮೆಂಬರ್ಗಳಾದ ಜಗದೀಶ್ ಅಡ್ತಲೆ, ಮೀನಾಕ್ಷಿ ಕೆ.ಎಚ್., ಧನಂಜಯ ಮದುವೆಗದ್ದೆ ಪ್ರೊಫೆಸರ್ ದಾಮೋದರ್ ಗೌಡ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾದರ್ ಡಿ.ವಿ., ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ