ಕೋಲ್ಕತಾ: ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಸತತ ಆರು ಸಿಕ್ಸರ್ಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ.ಇದರಲ್ಲಿ ಒಂದೇ ಓವರ್ನಲ್ಲಿ 5 ಸಿಕ್ಸರ್ಗಳ ಸಾಧನೆಯೂ ಸೇರಿದೆ.ಕೆಕೆಆರ್ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ ಪರಾಗ್
ಮೊಯಿನ್ ಅಲಿ ಎಸೆದ
ಇನಿಂಗ್ಸ್ನ 13ನೇ ಓವರ್ನಲ್ಲಿ ಸತತ 5 ಸಿಕ್ಸರ್ಗಳನ್ನು ಸಿಡಿಸಿ ಅಬ್ಬರಿಸಿದರು. ಆ ನಂತರ ವರುಣ್ ಚಕ್ರವರ್ತಿ ಅವರ ಓವರ್ನಲ್ಲಿ ತಾನೆದುರಿಸಿದ ಮೊದಲನೇ ಚೆಂಡನ್ನು ಸಿಕ್ಸರ್ಗೆ ಅಟ್ಟಿದರು. ಆ ಮೂಲಕ ಸತತ 6 ಎಸೆತಗಳಲ್ಲಿ ಸಿಕ್ಸರ್ಗಳ ಸಾಧನೆ ಮಾಡಿದ್ದಾರೆ.45 ಎಸೆತಗಳಲ್ಲಿ 95 ರನ್ ಗಳಿಸಿದ ಪರಾಗ್ ಕೇವಲ 5 ರನ್ನಿಂದ ಶತಕ ವಂಚಿತರಾದರು. ನಾಯಕನ ಆಟವಾಡಿದ ಪರಾಗ್ 8 ಸಿಕ್ಸರ್ ಹಾಗೂ 6 ಬೌಂಡರಿಗಳನ್ನು ಬಾರಿಸಿದರು. ಪರಾಗ್ 27 ಎಸೆತಗಳಲ್ಲಿ ಈ ವರ್ಷದ ಐಪಿಎಲ್ನಲ್ಲಿ ಮೊದಲ ಅರ್ಧಶತಕ ಗಳಿಸಿದರು.ಇತಿಹಾಸದಲ್ಲಿ ಒಂದೇ ಓವರ್ನಲ್ಲಿ 5 ಸಿಕ್ಸರ್ಗಳನ್ನು ಸಿಡಿಸಿದ 5ನೇ ಬ್ಯಾಟರ್ ಆಗಿದ್ದಾರೆ. ಈ ಮೂಲಕ ವಿಶೇಷ ಪಟ್ಟಿಗೆ ಸೇರಿದ್ದಾರೆ.