ಕೋಲ್ಕತ್ತ: ಇಂದು ನಡೆದ ಐಪಿಎಲ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 1ರನ್ನ ರೋಚಕ ಗೆಲುವು ದಾಖಲಿಸಿದೆ.ಮೊದಲು ಬ್ಯಾಟ್ ಮಾಡಿಸ ಕೋಲ್ಕತ್ತಾ ನಿಗದಿತ 20 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 206 ರನ್ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ವೀರೋಚಿತ ಸೋಲನುಭವಿಸಿತು. ರಾಜಸ್ಥಾನ ಪರ
ನಾಯಕ ರಿಯಾನ್ ಪರಾಗ್ 45 ಎಸೆತಗಳಲ್ಲಿ 6 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 95 ರನ್ ಗಳಿಸಿ ದಿಟ್ಟ ಹೋರಾಟ ನಡೆಸಿದರು. ಕೊನೆಯಲ್ಲಿ ಶುಭಂ ದುಬೆ 14 ಎಸೆತಗಳಲ್ಲಿ 25 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹ ತಂದರೂ ಎಡವಿತು.ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ಪರ ಆ್ಯಂಡ್ರೆ ರಸೆಲ್ (57) ಹಾಗೂ ಅಂಗ್ಕ್ರಿಷ್ ರಘುವಂಶಿ (44) ಬಿರುಸಿನ ಬ್ಯಾಟಿಂಗ್ ನರವಿನಿಂದ ಬೃಹತ್ ಮೊತ್ತ ಪೇರಿಸಿತು.
ರಹಮಾನುಲ್ಲಾ ಗುರ್ಬಾಜ್ 35 ಹಾಗೂ ರಹಾನೆ 30 ರನ್ಗಳ ಕೊಡುಗೆ ನೀಡಿದರು.ಬಳಿಕ ಕ್ರೀಸಿಗಿಳಿದ ಅಂಗ್ಕ್ರಿಷ್ ರಘುವಂಶಿ ಹಾಗೂ ಆ್ಯಂಡ್ರೆ ರಸೆಲ್ ಆಕ್ರಮಣಕಾರಿಯಾಗಿ ಆಡುವ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾದರು. ರಘುವಂಶಿ 31 ಎಸೆತಗಳಲ್ಲಿ 44 ರನ್ (5 ಬೌಂಡರಿ) ಗಳಿಸಿದರು.
ಅತ್ತ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ರಸೆಲ್ ಕೇವಲ 22 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು.25 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಬಾರಿಸಿ ಅಬ್ಬರಿಸಿದ ರಸೆಲ್, 57 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊನೆಯ ಹಂತದಲ್ಲಿ ರಿಂಕು ಸಿಂಗ್ ಅವರಿಂದಲೂ ಉತ್ತಮ ಸಾಥ್ ದೊರಕಿತು. ರಿಂಕು 6 ಎಸೆತಗಳಲ್ಲಿ 19 ರನ್ ಗಳಿಸಿ (2 ಸಿಕ್ಸರ್, 1 ಬೌಂಡರಿ) ಔಟಾಗದೆ ಉಳಿದರು.